ವಿಶಾಖಪಟ್ಟಣದಲ್ಲಿ ಪೊಲೀಸ್‌ ಸುಪರಿಂಟೆಂಡೆಂಟ್‌ ನಿಗೂಢ ಸಾವು

ವಿಶಾಖಪಟ್ಟಣದಲ್ಲಿ ಪೊಲೀಸ್‌ ಸುಪರಿಂಟೆಂಡೆಂಟ್‌ ನಿಗೂಢ ಸಾವು

Jun 16, 2016 12:28:27 PM (IST)

ವಿಶಾಖಪಟ್ಟಣ: ಇಲ್ಲಿನ ಪಡೇರು ವಿಭಾಗದ ಪೊಲೀಸ್‌ ಸುಪರಿಂಟೆಂಡೆಂಟ್‌ ಕೆ. ಶಶಿ ಕುಮಾರ್‌ ತಮ್ಮ ಅಧಿಕೃತ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪಿರುವುದು ಗುರುವಾರ ಬೆಳಗ್ಗೆ ಪತ್ತೆಯಾಗಿದೆ.

ಶಶಿಕುಮಾರ್ ಅವರ ಮನೆಯೊಳಗಡೆಯಿಂದ ಮೂರು ಗುಂಡು ಹಾರಾಟದ ಸದ್ದು ಕೇಳಿ ಬಂದಿದ್ದು, ಕೂಡಲೇ ಸೆಕ್ಯುರಿಟಿ ಗಾರ್ಡ್ ಒಳಗೆ ಬಂದು ನೋಡಿದಾಗ ಶಶಿಕುಮಾರ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.ತಕ್ಷಣ ಆಸ್ಪತರೆಗೆ ದಾಖಲಿಸುವಷ್ಟರಲ್ಲಿ ದಾರಿ ಮಧ್ಯೆ ಅಸುನೀಗಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಮೂಲತಃ ತಮಿಳುನಾಡಿನ ಸೇಲಂ ನವರಾಗಿರುವ ಶಶಿ ಕುಮಾರ್‌ ಅವರು 2012ರ ಐಪಿಎಸ್‌ ಬ್ಯಾಚಿನ ಅಧಿಕಾರಿಯಾಗಿದ್ದಾರೆ. ಅವರನ್ನು 2015ರ ಡಿಸೆಂಬರ್‌ 31ರಂದು ಪಡೇರು ವಿಭಾಗಕ್ಕೆ ನಿಯೋಜಿಸಲಾಗಿತ್ತು. ಪಡೇರು ವಿಭಾಗದಲ್ಲಿ ವ್ಯಾಪಕವಾಗಿದ್ದ ಗಾಂಜಾ ಬೆಳೆಯುವಿಕೆ ಮತ್ತು ಮಾರಾಟವನ್ನು ಹತ್ತಿಕ್ಕುವಲ್ಲಿ ಶಶಿಕುಮಾರ್‌ ಬಹುಮಟ್ಟಿಗೆ ಸಫ‌ಲರಾಗಿದ್ದರು. ಮಾದಕ ದ್ರವ್ಯ ವಿರುದ್ಧ ಅವರು ನಡೆಸುತ್ತಿದ್ದ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಯ ಮಾದಕ ದ್ರವ್ಯ ವಶವಾಗಿತ್ತು. ಮನೆಯಲ್ಲಿ ಅವರು ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.