ಬೆಟ್ ಕಟ್ಟಿ ತಲೆ ಕೂದಲು ಬೋಳಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತ

ಬೆಟ್ ಕಟ್ಟಿ ತಲೆ ಕೂದಲು ಬೋಳಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತ

YK   ¦    May 25, 2019 05:53:51 PM (IST)
ಬೆಟ್ ಕಟ್ಟಿ ತಲೆ  ಕೂದಲು ಬೋಳಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತ

ಮಧ್ಯಪ್ರದೇಶ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಬೆಟ್ ಕಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತ ತನ್ನ ತಲೆ ಕೂದಲನ್ನು ಸಾರ್ವಜನಿಕರ ಎದುರಲ್ಲೇ ಬೋಳಿಸಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಬೆಟ್ ಕಟ್ಟಿ ಕೂದಲು ಕಳೆದುಕೊಂಡವನನ್ನು ರಾಯಘರ್ ನ ಬಾಪು ಲಾಲ್ ಸೇನ್ ಎಂದು ಗುರುತಿಸಲಾಗಿದೆ.

ಕಾಂಗ್ರೆಸ್ ಸೋತರೆ ಬಾಪು ತಲೆ ಕೂದಲು ಬೋಳಿಸುತ್ತೇನೆ ಎಂದು, ಒಂದು ವೇಳೆ ಬಿಜೆಪಿ ಸೋತರೆ ಬಿಜೆಪಿ ಕಾರ್ಯಕರ್ತ ಕೂದಲು ಬೋಳಿಸಿಕೊಳ್ಳಬೇಕು ಎಂದು ಇಬ್ಬರ ಮಧ್ಯೆ ತೀರ್ಮಾಣವಾಗಿತ್ತು. ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದರಿಂದ ಪಕ್ಷದ ಪರ ವಿಶ್ವಾಸ ಹೊಂದಿದ್ದ ಕಾರ್ಯಕರ್ತ ಬಾಪು ಎಂಬಾತ ತನ್ನ ಕೂದಲು ಬೋಳಿಸಿಕೊಂಡಿದ್ದಾನೆ.

ಲೋಕಸಭಾ ಚುನಾವಣೆ ನಿರ್ಧಾರ ಆದ ಬಳಿಕ ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಭಾರೀ ಪೈಪೋಟಿ ಹಾಗೂ ಬೆಟ್ಟಿಂಗ್ ಗಳು ಏರ್ಪಟ್ಟಿತ್ತು.