ಎಂಡಿಎಚ್ ಸಾಂಬರ್ ಮಸಾಲಕ್ಕೆ ಅಮೆರಿಕಾ ನಿಷೇಧ

ಎಂಡಿಎಚ್ ಸಾಂಬರ್ ಮಸಾಲಕ್ಕೆ ಅಮೆರಿಕಾ ನಿಷೇಧ

HSA   ¦    Sep 12, 2019 02:53:04 PM (IST)
ಎಂಡಿಎಚ್ ಸಾಂಬರ್ ಮಸಾಲಕ್ಕೆ ಅಮೆರಿಕಾ ನಿಷೇಧ

ನವದೆಹಲಿ: ಭಾರತ ಹಾಗೂ ವಿದೇಶದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿರುವಂತಹ ಎಂಡಿಎಚ್  ಸಾಂಬರ್ ಮಸಾಲದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾದ ಕಾರಣದಿಂದಾಗಿ ಅಮೆರಿಕಾದಲ್ಲಿ ನಿಷೇಧ ಹೇರಲಾಗಿದೆ.

ಈ ಕಾರಣದಿಂದಾಗಿ ಕಂಪೆನಿ ತನ್ನ ಮೂರು ಉತ್ಪನ್ನಗಳನ್ನು ಅಮೆರಿಕಾದ ಮಾರುಕಟ್ಟೆಯಿಂದ ಹಿಂಪಡೆದುಕೊಂಡಿದೆ.

ಅಮೆರಿಕದ ಆಹಾರ ಮತ್ತು ಔಷಧ ಆಡಳಿತ(ಎಫ್ ಡಿಎ) ನಡೆಸಿದ ಪರೀಕ್ಷೆಯಲ್ಲಿ ಬ್ಯಾಕ್ಟೀರಿಯಾ ಕಂಡುಬಂದ ಹಿನ್ನೆಲೆಯಲ್ಲಿ ಎಂಡಿಎಚ್ ಸಾಂಬಾರ ಮಸಾಲವನ್ನು ನಿಷೇಧಿಸಲಾಗಿದೆ.

ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಆಹಾರದ ಮೂಲಕ ಪಸರಿಸುವುದು ಮತ್ತು ಇದರಿಂದ ಅತಿಸಾರ, ಬೇಧಿ, ಹೊಟ್ಟೆನೋವು, ಜ್ವರ ಇತ್ಯಾದಿ ಕಾಣಿಸಿಕೊಳ್ಳುವುದು.