ಸಂಪೂರ್ಣ ದೇಶವೇ 21 ದಿನಗಳ ಕಾಲ ಲಾಕ್ ಡೌನ್

ಸಂಪೂರ್ಣ ದೇಶವೇ 21 ದಿನಗಳ ಕಾಲ ಲಾಕ್ ಡೌನ್

HSA   ¦    Mar 24, 2020 08:17:05 PM (IST)
ಸಂಪೂರ್ಣ ದೇಶವೇ 21 ದಿನಗಳ ಕಾಲ ಲಾಕ್ ಡೌನ್

ನವದೆಹಲಿ: ಕೊರೋನಾ ಸೋಂಕಿನಿಂದ ಪಾರಾಗಲು ಸಂಪೂರ್ಣ ದೇಶದಲ್ಲಿ ಇಂದು(ಮಾ.24) ಮಧ್ಯರಾತ್ರಿಯಿಂದಲೇ ಲಾಕ್ ಡೌನ್ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.

ಮುಂದಿನ 21 ದಿನಗಳ ಕಾಲ ದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತದೆ ಮತ್ತು ಇದರಿಂದ ದೇಶವು ಭಾರೀ ಮಟ್ಟದ ಆರ್ಥಿಕ ಸಂಕಷ್ಟವು ಉಂಟಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

ನಿಮ್ಮ ಮುಂದಿನ 21 ದಿನಗಳು ತುಂಬಾ ಕಠಿಣವಾಗಲಿದೆ ಎಂದು ನನಗೆ ತಿಳಿದಿದೆ. ಆದರೆ ನಾವು ಈ 21 ದಿನಗಳ ಕಾಲ ಸಂಕಷ್ಟವನ್ನು ಎದುರಿಸದೆ ಇದ್ದರೆ ನಾವು 21 ವರ್ಷ ಹಿಂದಕ್ಕೆ ಹೋಗಲಿದ್ದೇವೆ ಎಂದರು.

ತಜ್ಞರ ಪ್ರಕಾರ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಇದು ಅನಿವಾರ್ಯ. ಕೆಲವೊಮ್ಮೆ ರೋಗಿಯು ತುಂಬಾ ಚೆನ್ನಾಗಿ ಇರುತ್ತಾನೆ. ಆದರೆ ಬಳಿಕ ಆತನಲ್ಲಿ ಇದು ಕಾಣಿಸಿಕೊಳ್ಳುವುದು ಎಂದು ಅವರು ತಿಳಿಸಿದರು.