ಪೈಲಟ್ ಗಳ ಕೊರತೆ: ಇಂಡಿಗೋದ ಹಲವು ವಿಮಾನಗಳು ರದ್ದು

ಪೈಲಟ್ ಗಳ ಕೊರತೆ: ಇಂಡಿಗೋದ ಹಲವು ವಿಮಾನಗಳು ರದ್ದು

HSA   ¦    Feb 11, 2019 05:18:43 PM (IST)
ಪೈಲಟ್ ಗಳ ಕೊರತೆ: ಇಂಡಿಗೋದ ಹಲವು ವಿಮಾನಗಳು ರದ್ದು

ಮುಂಬಯಿ: ಪೈಲಟ್ ಲಭ್ಯತೆಯ ಕೊರತೆಯಿಂದಾಗಿ ಇಂಡಿಗೋ ವಿಮಾನ ಯಾನ ಸಂಸ್ಥೆಯ ದೇಶದಾದ್ಯಂತ ಹಲವು ವಿಮಾನಗಳನ್ನು ರದ್ದಗೊಳಿಸಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಕಳೆದ ಕೆಲವು ತಿಂಗಳಿಂದ ನಷ್ಟದಲ್ಲೇ ವ್ಯವಹರಿಸುತ್ತಿರುವಂತಹ ಇಂಡಿಗೋ ಸಂಸ್ಥೆಯು ಹೈದರಾಬಾದ್, ಚೆನ್ನೈ, ಜೈಪುರ ಮುಂತಾದ ಕಡೆಗಳಲ್ಲಿ ವಿಮಾನ ಯಾನ ರದ್ದು ಮಾಡಿದೆ.

ಪೈಲಟ್ ಕೊರತೆಯಿಂದಾಗಿ ವಿಮಾನಯಾನ ರದ್ದುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇಂಡಿಗೋ ಸಂಸ್ಥೆಯು ಹವಾಮಾನ ವೈಪರಿತ್ಯದಿಂದಾಗಿ ಹೀಗೆ ಮಾಡಲಾಗಿದೆ ಎಂದು ಹೇಳಿದೆ.