ಪ್ರೇಮಿಗಳ ದಿನದಂದು ಕಾಲೇಜಿಗೆ ಬರಬೇಡಿ: ಲಖನೌ ವಿವಿ ಪ್ರಕಟಣೆ

ಪ್ರೇಮಿಗಳ ದಿನದಂದು ಕಾಲೇಜಿಗೆ ಬರಬೇಡಿ: ಲಖನೌ ವಿವಿ ಪ್ರಕಟಣೆ

YK   ¦    Feb 13, 2018 06:35:07 PM (IST)
ಪ್ರೇಮಿಗಳ ದಿನದಂದು ಕಾಲೇಜಿಗೆ ಬರಬೇಡಿ: ಲಖನೌ ವಿವಿ ಪ್ರಕಟಣೆ

ಲಖನೌ: ಪ್ರೇಮಿಗಳ ದಿನದಂದು ಕಾಲೇಜಿಗೆ ಬರಬೇಡಿ ಎಂದು ಲಖನೌ ವಿಶ್ವವಿದ್ಯಾಲಯ ಪ್ರಕಟಣೆಯನ್ನು ಹೊರಡಿಸಿದೆ. ಒಂದು ವೇಳೆ ಕಾಲೇಜಿಗೆ ಬಂದು ಅನುಚಿತವಾಗಿ ವರ್ತಿಸಿದರೆ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

‘ಪಾಶ್ಚಾತ್ಯ ಸಂಸ್ಕೃತಿಯಾಗಿ ಫೆ.14ರಂದು ಯುವ ಪ್ರೇಮಿಗಳು ವೇಲೆಂಟೈನ್ಸ್ ಡೇ ಆಗಿ ಸೆಲೆಬ್ರೆಟ್ ಮಾಡುತ್ತಾರೆ. ಹಾಗಾಗಿ, ಕೋ–ಎಜುಕೇಷನ್(ಯುವಕ–ಯುವತಿಯರು ಕಲಿಯುವ) ಇರುವ ಕಾಲೇಜುಗಳಲ್ಲಿ ಶಿವರಾತ್ರಿಯ ಪ್ರಯುಕ್ತ ರಜೆ ಘೋಷಿಸಿದ್ದೇವೆ’ ಎಂದು ವಿಶ್ವವಿದ್ಯಾಲಯದ ಅಧಿಕಾರಿ ವಿನೋದ್ ಸಿಂಗ್ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ವಿವರಿಸಿದ್ದಾರೆ. ಅದಲ್ಲದೆ ವಿದ್ಯಾರ್ಥಿಗಳ ಪೋಷಕರಲ್ಲಿಯೂ ಮಕ್ಕಳನ್ನು ಕಾಲೇಜಿಗೆ ಕಳುಹಿಸದಂತೆ ಮನವಿಯನ್ನು ಮಾಡಿದೆ.

‘ಇನ್ನೂ ನಾಳೆ ಯಾವುದೇ ತರಗತಿ, ಪ್ರಾಯೋಗಿಕ ಪರೀಕ್ಷೆಗಳು ಅಥವಾ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವುದಿಲ್ಲ’ ಎಂದು ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಈ ಕ್ರಮವನ್ನು ಕೈಗೊಂಡಿದೆ. ಇದೀಗ ವಿವಿಯ ಈ ಪ್ರಕಟಣೆಗೆ ವಿದ್ಯಾರ್ಥಿ ಸಮೂಹ ನೈತಿಕ ಪೊಲೀಸ್ಗಿರಿಗೆ ಹೋಲಿಸಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದೆ.