ಯುದ್ಧ ವಿಮಾನದ ಅವಶೇಷದ ಬಳಿಗೆ ತೆರಳಲು ಹರಸಾಹಸ

ಯುದ್ಧ ವಿಮಾನದ ಅವಶೇಷದ ಬಳಿಗೆ ತೆರಳಲು ಹರಸಾಹಸ

HSA   ¦    Jun 12, 2019 12:56:31 PM (IST)
ಯುದ್ಧ ವಿಮಾನದ ಅವಶೇಷದ ಬಳಿಗೆ ತೆರಳಲು ಹರಸಾಹಸ

ನವದೆಹಲಿ: ನಾಪತ್ತೆಯಾಗಿದ್ದ ಯುದ್ಧವಿಮಾನ ಎಎನ್-32ನ ಅವಶೇಷಗಳು ಪತ್ತೆಯಾಗಿದ್ದು, ದುರ್ಗಮ ಪ್ರದೇಶಕ್ಕೆ ಇಳಿಯಲು ಹರಸಾಹಸ ಪಡೆಲಾಗುತ್ತಿದೆ.

ಅರುಣಾಚಲ ಪ್ರದೇಶದ ಲಿಪೋ ಸಮೀಪದ ಅತೀ ಎತ್ತರದ ಮತ್ತು ದುರ್ಗಮ ಪ್ರದೇಶದಲ್ಲಿ ಅವಶೇಷ ಪತ್ತೆಯಾಗಿದೆ. ಆದರೆ ಈ ಪ್ರದೇಶಕ್ಕೆ ಇಳಿಯಲು ಈಗ ತುಂಬಾ ಕಷ್ಟಪಡಲಾಗುತ್ತದೆ.

ಮಂಗಳವಾರ ಅವಶೇಷ ಪತ್ತೆಯಾಗಿರುವಂತಹ ಜಾಗಕ್ಕೆ ತೆರಳಲು ಹೆಲಿಕಾಪ್ಟರ್ ಗಳಿಗೆ ಕೂಡ ಸಾಧ್ಯವಾಗಿಲ್ಲ. ಬುಧವಾರ ಕೂಡ ಈ ಕಾರ್ಯಾಚರಣೆಯು ಮುಂದುವರಿದಿದೆ.

ಅವಶೇಷಗಳಿರುವ ಪ್ರದೇಶಕ್ಕೆ ಇಳಿದರೆ ಮಾತ್ರ ಅದರಲ್ಲಿ ಇದ್ದವರು ಬದುಕುಳಿದಿದ್ದಾರೆಯಾ ಅಥವಾ ಇಲ್ಲವಾ ಎನ್ನುವುದು ತಿಳಿದುಬರಲಿದೆ.