ಪ್ರಧಾನಿ ಮೋದಿ, ಸಿಎಂ ಯೋಗಿ ಚಿತ್ರ ಬಿಡಿಸಿದ್ದಕ್ಕೆ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ

ಪ್ರಧಾನಿ ಮೋದಿ, ಸಿಎಂ ಯೋಗಿ ಚಿತ್ರ ಬಿಡಿಸಿದ್ದಕ್ಕೆ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ

Sep 11, 2017 11:49:41 AM (IST)
ಪ್ರಧಾನಿ ಮೋದಿ, ಸಿಎಂ ಯೋಗಿ ಚಿತ್ರ ಬಿಡಿಸಿದ್ದಕ್ಕೆ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ

ಬಲ್ಲಿಯಾ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಚಿತ್ರವನ್ನು ಬಿಡಿಸಿದ್ದಕ್ಕೆ ಮುಸ್ಲಿಂ ಮಹಿಳೆ ಮೇಲೆ ಆಕೆಯ ಪತಿ ಹಾಗೂ ಇತರ ಐವರು ಸೇರಿ ಹಲ್ಲೆ ನಡೆಸಿದ್ದು ಎನ್ನಲಾಗಿದ್ದು, ಈ ಕುರಿತು ಸಿಕಂದರ್‌ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಲ್ಲೆಗೊಳಗಾದ ನಗ್ಮಾ ಪ್ರವೀಣ್‌ ಅವರ ತಂದೆ ಶಂಷೇರ್‌ ಖಾನ್‌ ಈ ಸಂಬಂಧ ದೂರು ನೀಡಿದ್ದರು. ನಗ್ಮಾ ಪತಿ ಪರ್ವೇಜ್‌ ಖಾನ್‌ ಸೇರಿದಂತೆ ಆರು ಮಂದಿ ಹಲ್ಲೆ ನಡೆಸಿ, ತಮ್ಮ ಮಗಳನ್ನು ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್‌ ಕುಮಾರ್‌ ಹೇಳಿದ್ದಾರೆ. 

ಬಸರಿಕ್‌ಪುರ ಗ್ರಾಮದಲ್ಲಿ ಕಳೆದ ವರ್ಷ ನಗ್ಮಾ ಅವರ ವಿವಾಹ ಪರ್ವೇಜ್‌ ಜೊತೆ ನಡೆದಿತ್ತು. ಪ್ರಕರಣದ ತನಿಖೆ ಮುಂದುವರಿದಿದೆ.