ಚೆನ್ನೈನಲ್ಲಿ ಭೀಕರ ಅಪಘಾತ: ಬೆಂಗಳೂರಿನ ಐವರು ದುರ್ಮರಣ

ಚೆನ್ನೈನಲ್ಲಿ ಭೀಕರ ಅಪಘಾತ: ಬೆಂಗಳೂರಿನ ಐವರು ದುರ್ಮರಣ

YK   ¦    Mar 13, 2018 10:12:33 AM (IST)
ಚೆನ್ನೈನಲ್ಲಿ ಭೀಕರ ಅಪಘಾತ: ಬೆಂಗಳೂರಿನ ಐವರು ದುರ್ಮರಣ

ತಮಿಳುನಾಡು: ಕೆಎಸ್ ಆರ್ ಟಿಸಿ ಬಸ್, ಲಾರಿ ಹಾಗೂ ಮಾರುತಿ ಇಕೋ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೆಂಗಳೂರಿನ ಐವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕೃಷ್ಣಗಿರಿಯಲ್ಲಿ ಸಂಭವಿಸಿದೆ.

ಈ ಘಟನೆ ಜಿಲ್ಲೆಯ ಸೂಳಗಿರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಬೆಂಗಳೂರಿನ ಲಕ್ಷ್ಮೀನಾರಾಯಣಪುರದ ನಿವಾಸಿಗಳು ಎಂದು ಗುರುತಿಸಲಾಗಿದೆ.

ಮೃತರನ್ನು ಸುಮತಿ(45). ಶಂಕರ್(50), ಮಣಿ, ಸುಮತಿ ಹಾಗೂ ಕಬೇರನ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆನಂದ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕೃಷ್ಣಗಿರಿ ಜಿಲ್ಲಾಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಚೆನ್ನೈನ ಸಂಬಂಧಿಕರ ಮನೆಯಿಂದ ಬೆಂಗಳೂರಿಗೆ ವಾಪಾಸ್ಸಗಾತ್ತಿದ್ದಾಗ ವೇಳೆ ಈ ದುರ್ಘಟನೆ ಬಡೆದಿದೆ ಎಂದು ತಿಳಿದು ಬಂದಿದೆ.

ಬಸ್ ನಲ್ಲಿದ್ದ 15 ಜನರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.  ಈ ಕುರಿತು ಸೂಳಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.