ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಖಡಕ್ ಎಚ್ಚರಿಕೆ

ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಖಡಕ್ ಎಚ್ಚರಿಕೆ

HSA   ¦    Sep 12, 2019 04:15:37 PM (IST)
ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಖಡಕ್ ಎಚ್ಚರಿಕೆ

ನವದೆಹಲಿ: ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರವು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ಯ ಬಗ್ಗೆ ಏನು ಮಾಡಬೇಕೆಂದು ಸೂಚಿಸಿದರೆ, ಸೇನೆಯು ಎಲ್ಲಾ ಮಟ್ಟದಲ್ಲಿ ತಯಾರಿಯಲ್ಲಿ ತೊಡಗಿದೆ ಎಂದು ಅವರು ಹೇಳಿದೆ.

ಕೇವಲ ಕೇಂದ್ರ ಒಂದು ಸೂಚನೆಗಾಗಿ ಸೇನೆಯು ಕಾಯುತ್ತಿದೆ. ಎಲ್ಲಾ ಸಂಸ್ಥೆಗಳು ಸರ್ಕಾರದ ಆದೇಶದಂತೆ ನಡೆಯುತ್ತದೆ. ಅದೇ ರೀತಿಯಾಗಿ ಸೇನೆ ಕೂಡ. ಸೇನೆಯು ಎಲ್ಲಾ ರೀತಿಯಿಂದಲೂ ತಯಾರಾಗಿದೆ ಎಂದು ರಾವತ್ ತಿಳಿಸಿದರು.

ಜಮ್ಮುಕಾಶ್ಮೀರದಲ್ಲಿ ಶಾಂತಿ ಮತ್ತು ಭದ್ರತೆ ನೆಲೆಸುವಂತೆ ಮಾಡಲು ಅಲ್ಲಿನ ಜನರು ಸೇನೆಗೆ ನೆರವಾಗಬೇಕು ಎಂದರು.