17 ರಾಜ್ಯಗಳಲ್ಲಿ ಖಾತೆ ತೆರೆಯದ ಕಾಂಗ್ರೆಸ್

17 ರಾಜ್ಯಗಳಲ್ಲಿ ಖಾತೆ ತೆರೆಯದ ಕಾಂಗ್ರೆಸ್

HSA   ¦    May 24, 2019 02:43:42 PM (IST)
17 ರಾಜ್ಯಗಳಲ್ಲಿ ಖಾತೆ ತೆರೆಯದ ಕಾಂಗ್ರೆಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ 2014ರಿಂದ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದುಕೊಂಡು ಲೋಕಸಭೆಯಲ್ಲಿ ಇತಿಹಾಸ ನಿರ್ಮಿಸಿದೆ.

ಎಂಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಜೆಪಿಯು ಉತ್ತಮ ಫಲಿತಾಂಶ ಪಡೆದುಕೊಂಡಿದೆ. ಆದರೆ ಇದೇ ವೇಳೆ ಕಾಂಗ್ರೆಸ್ ತುಂಬಾ ಕಳಪೆ ಪ್ರದರ್ಶನ ನೀಡಿ 17 ರಾಜ್ಯಗಳಲ್ಲಿ ಖಾತೆ ತೆರೆಯಲು ವಿಫಲವಾಗಿದೆ.

ಅರುಣಾಚಲ ಪ್ರದೇಶ(2), ಗುಜರಾತ್(26), ಹರ್ಯಾಣ(10), ಹಿಮಾಚಲ ಪ್ರದೇಶ(4), ರಾಜಸ್ಥಾನ(25), ತ್ರಿಪುರ(2) ಮತ್ತು ಉತ್ತರಾಖಂಡ(5)ದಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ. ಇದೇ ವೇಳೆ ದೆಹಲಿಯಲ್ಲಿ 7 ಸ್ಥಾನ ಗೆದ್ದುಕೊಂಡಿದೆ.

ಗುಜರಾತ್ ಮತ್ತು ಹಿಂದಿ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ಬಿಜೆಪಿ ಪ್ರದರ್ಶನ ನಿರೀಕ್ಷೆ ಮಾಡಲಾಗಿತ್ತು. ಆದರೆ ಛತ್ತೀಸಗಡ, ಮಹಾರಾಷ್ಟ್ರ, ಒಡಿಸ್ಸಾ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ.

ತೆಲಂಗಾಣದಲ್ಲಿ ಬಿಜೆಪಿ ನಾಲ್ಕು ಸ್ಥಾನ ಗೆದ್ದುಕೊಂಡು ಉತ್ತಮ ಸಾಧನೆ ಮಾಡಿದೆ. ಅದೇ ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಖಾತೆ ತೆರೆದಿಲ್ಲ.

ಕಾಂಗ್ರೆಸ್ 52 ಕ್ಷೇತ್ರಗಳನ್ನು ಗೆದ್ದುಕೊಂಡು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ದೆಹಲಿ, ಗುಜರಾತ್, ಹರ್ಯಾಣ, ಹಿಮಾಚಲ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಮಿಜೋರಾಂ, ಒಡಿಸ್ಸಾ, ರಾಜಸ್ಥಾನ, ಸಿಕ್ಕಿಂ, ತ್ರಿಪುರ, ಉತ್ತರಾಖಂಡ, ಅಂಡಮಾನ್ ಮತ್ತು ನಿಕೋಬಾರ್, ಚಂಡೀಗಡ, ದಾದ್ರ ನಗರ್ ಹವೇಲಿ, ದಮನ್ ದಿಯು ಮತ್ತು ಲಕ್ಷದ್ವೀಪದಲ್ಲಿ ಖಾತೆ ತೆರೆದಿಲ್ಲ.