ರಾಹುಲ್ ಅಧ್ಯಕ್ಷ ಸ್ಥಾನದಿಂದ ಇಳಿಯುತ್ತೇನೆಂದರೂ ಬಿಡದ ಪಕ್ಷದ ನಾಯಕರು!

ರಾಹುಲ್ ಅಧ್ಯಕ್ಷ ಸ್ಥಾನದಿಂದ ಇಳಿಯುತ್ತೇನೆಂದರೂ ಬಿಡದ ಪಕ್ಷದ ನಾಯಕರು!

HSA   ¦    May 25, 2019 05:02:39 PM (IST)
ರಾಹುಲ್ ಅಧ್ಯಕ್ಷ ಸ್ಥಾನದಿಂದ ಇಳಿಯುತ್ತೇನೆಂದರೂ ಬಿಡದ ಪಕ್ಷದ ನಾಯಕರು!

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿರುವಂತಹ ರಾಜೀನಾಮೆಯನ್ನು ಪಕ್ಷವು ತಿರಸ್ಕರಿಸಿದೆ.

ಈ ಬಗ್ಗೆ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಸೋಲಿನ ಬಗ್ಗೆ ಪರಾಮರ್ಶೆ ನಡೆಸಲು ಶನಿವಾರ ನಡೆದ ಸಿಡಬ್ಲ್ಯುಸಿ ಸಭೆಯ ಬಳಿಕ ಅವರು ಮಾಧ್ಯಗಳೊಂದಿಗೆ ಮಾತನಾಡಿದರು.

ನೆಹರೂ ಕುಟುಂಬಕ್ಕೆ ಹೊರತಾಗಿರುವವರು ಪಕ್ಷದ ಅಧ್ಯಕ್ಷರಾಗಬೇಕು. ಪ್ರಿಯಾಂಕಾ ಗಾಂಧಿ ಅವರು ಹೆಸರು ಪ್ರಸ್ತಾಪ ಮಾಡುವುದು ಬೇಡ ಎಂದು ರಾಹುಲ್ ಹೇಳಿದರು. ಆದರೆ ಅವರ ಅಭಿಪ್ರಾಯವನ್ನು ಸಭೆಯಲ್ಲಿದ್ದ ನಾಯಕರು ತಿರಸ್ಕರಿಸಿದ್ದಾರೆ ಎಂದರು.

ರಾಹುಲ್ ಅವರು ಅಧ್ಯಕ್ಷರಾಗಿಯೇ ಮುಂದುವರಿಯುತ್ತಾರೆ. ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ಸಭೆಯಲ್ಲಿ ಚರ್ಚೆ ಮಾಡಲಾಯಿತು ಎಂದು ತಿಳಿಸಿದರು.