ಮದುವೆ ವೇಳೆ ಸ್ನೇಹಿತ ಹಾರಿಸಿದ ಗುಂಡು ತಗುಲಿ ಸೈನಿಕ ಸಾವು

ಮದುವೆ ವೇಳೆ ಸ್ನೇಹಿತ ಹಾರಿಸಿದ ಗುಂಡು ತಗುಲಿ ಸೈನಿಕ ಸಾವು

YK   ¦    Feb 13, 2018 05:40:27 PM (IST)
ಮದುವೆ ವೇಳೆ ಸ್ನೇಹಿತ ಹಾರಿಸಿದ ಗುಂಡು ತಗುಲಿ ಸೈನಿಕ ಸಾವು

ಕಾನ್ಪುರ: ಮದುವೆ ಸಂಭ್ರಮದ ವೇಳೆ ಸ್ನೇಹಿತ ಹಾರಿಸಿದ ಗುಂಡು ತಾಗುಲಿ 28 ವರ್ಷದ ಸೈನಿಕ ಸಾವಿಗೀಡಾಗಿರುವ ಘಟನೆ ಇಲ್ಲಿನ ಶ್ಯಾಮ್ ನಗರ ಪ್ರದೇಶದಲ್ಲಿ ನಡೆದಿದೆ.

‘ಕುಲದೀಪ್ ದೀಕ್ಷಿತ್ ಸಾವಿಗೀಡಾದ ಸೈನಿಕ. ಈತನ ಸ್ನೇಹಿತ ಶಿವ ಪ್ರಕಾಶ್ ಮದುವೆ ಸಂಭ್ರಮಾಚರಣೆ ವೇಳೆ ಈ ಅವಘಡ ಸಂಭವಿಸಿದೆ’ ಎಂದು ಪೂರ್ವ ವಿಭಾಗದ ಎಸ್ಪಿ ಅನುರಾಗ್ ಆರ್ಯ ಹೇಳಿದ್ದಾರೆ.

‘ಮದುವೆ ಸಮಾರಂಭದಲ್ಲಿ ಅತಿಥಿಗಳು ನೃತ್ಯ ಮಾಡುತ್ತಿದ್ದರು. ಈ ವೇಳೆ ಕುಲದೀಪ್ ಅವರ ಪರವಾನಗಿ ಹೊಂದಿದ್ದ ಬಂದೂಕಿನಿಂದ ಈತನ ಮತ್ತೊಬ್ಬ ಸ್ನೇಹಿತ ಸಂಜಯ್ ಮೌರ್ಯ ಹಲವು ಬಾರಿ ಗುಂಡು ಹಾರಿಸಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಒಂದು ಗುಂಡು ದೀಕ್ಷಿತ್ ಅವರ ಹೊಟ್ಟೆ ಭಾಗಕ್ಕೆ ತಗುಲಿದೆ. ಕೂಡಲೇ ಅವರನ್ನು ಕಾನ್ಶಿರಾಮ್ ತುರ್ತು ಚಿಕಿತ್ಸಾ ಕೇಂದ್ರಕ್ಕೆ ಸೇರಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು’ ಎಂದು ಆರ್ಯ ತಿಳಿಸಿದ್ದಾರೆ.

ಸದ್ಯ ಆರೋಪಿ ಆರ್ಯ ಅವರನ್ನು ಬಂಧಿಸಲಾಗಿದೆ.