ಸ್ಪೈಸ್ ಜೆಟ್ ವಿಮಾನದ ಟೈರ್ ಸ್ಫೋಟ: ತುರ್ತು ಲ್ಯಾಂಡಿಂಗ್

ಸ್ಪೈಸ್ ಜೆಟ್ ವಿಮಾನದ ಟೈರ್ ಸ್ಫೋಟ: ತುರ್ತು ಲ್ಯಾಂಡಿಂಗ್

HSA   ¦    Jun 12, 2019 04:35:20 PM (IST)
ಸ್ಪೈಸ್ ಜೆಟ್ ವಿಮಾನದ ಟೈರ್ ಸ್ಫೋಟ: ತುರ್ತು ಲ್ಯಾಂಡಿಂಗ್

ಜೈಪುರ: ದುಬೈನಿಂದ ಆಗಮಿಸಿದ್ದ ಸ್ಪೈಸ್ ಜೆಟ್ ವಿಮಾನವೊಂದರ ಟೈರ್ ಸ್ಫೋಟಗೊಂಡ ಕಾರಣ ತುರ್ತು ಲ್ಯಾಂಡಿಂಗ್ ಮಾಡಿರುವ ಘಟನೆಯು ಬುಧವಾರ ಬೆಳಗ್ಗೆ ನಡೆದಿದೆ.

ಟೈರ್ ಸ್ಫೋಟದಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಮಾನದಲ್ಲಿದ್ದ ಸುಮಾರು 189 ಮಂದಿ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ವಿಮಾನದ ಚಕ್ರವು ಯಾಕಾಗಿ ಸ್ಫೋಟಗೊಂಡಿದೆ ಎಂದು ಇದುವರೆಗೆ ತಿಳಿದುಬಂದಿಲ್ಲ. ಇದರ ತಪಾಸಣೆ ನಡೆಸಲಾಗುತ್ತಿದೆ.