ವಿತ್ತ ವರ್ಷ 18-19ರ ಆದಾಯ ತೆರಿಗೆ ಪಾವತಿ ದಿನಾಂಕ ಮುಂದೂಡಿಕೆ

ವಿತ್ತ ವರ್ಷ 18-19ರ ಆದಾಯ ತೆರಿಗೆ ಪಾವತಿ ದಿನಾಂಕ ಮುಂದೂಡಿಕೆ

HSA   ¦    Mar 24, 2020 04:40:01 PM (IST)
ವಿತ್ತ ವರ್ಷ 18-19ರ ಆದಾಯ ತೆರಿಗೆ ಪಾವತಿ ದಿನಾಂಕ ಮುಂದೂಡಿಕೆ

ನವದೆಹಲಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವಿತ್ತ ವರ್ಷ 2018-19ರ ಆದಾಯ ತೆರಿಗೆ ಪಾವತಿ ದಿನಾಂಕವನ್ನು ಜೂನ್ 30ರ ತನಕ ಮುಂದೂಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಾಯ ತೆರಿಗೆ ಪಾವತಿ ವಿಳಂಬಕ್ಕೆ ವಿಧಿಸಲಾಗುತ್ತಿದ್ದ ಬಡ್ಡಿಯನ್ನು 12ರಿಂದ 9ಕ್ಕೆ ಇಳಿಸಲಾಗಿದೆ ಎಂದರು.

ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಯ ಅಂತಿಮ ದಿನಾಂಕವನ್ನು ಮಾರ್ಚ್ 31ರಿಂದ ಜೂನ್ 30ರ ತನಕ ವಿಸ್ತರಿಸಲಾಗಿದೆ. ಇದರಿಂದಾಗಿ ಜನರು ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರುವುದು ತಪ್ಪಲಿದೆ.

ವಿವಾದ್ ಸೆ ವಿಶ್ವಾಸ್ ತೆರಿಗೆ ವಿವಾದ ಯೋಜನೆಯ ದಿನಾಂಕವನ್ನು ಕೂಡ ಜೂನ್ 30ರ ತನಕ ವಿಸ್ತರಿಸಲಾಗಿದೆ ಎಂದು ತಿಳಿಸಿದರು.