ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಭೀಕರ ದುರಂತ: ಐದು ಮಂದಿ ದಾರುಣ ಸಾವು

ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಭೀಕರ ದುರಂತ: ಐದು ಮಂದಿ ದಾರುಣ ಸಾವು

HSA   ¦    Feb 13, 2018 03:09:01 PM (IST)
ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಭೀಕರ ದುರಂತ: ಐದು ಮಂದಿ ದಾರುಣ ಸಾವು

ನವದೆಹಲಿ: ಕೇರಳದ ಕೊಚ್ಚಿಯಲ್ಲಿರುವಂತಹ ಶಿಪ್ ಯಾರ್ಡ್ ನಲ್ಲಿ ನಡೆದ ಭೀಕರ ದುರಂತದಲ್ಲಿ ಐದು ಮಂದಿ ದಾರುಣವಾಗಿ ಮೃತಪಟ್ಟು, 11ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಸಮುದ್ರದಾಚೆಯಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಒಎನ್ ಜಿಸಿ ಡ್ರಿಲ್ಲಿಂಗ್ ಘಟಕದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಗಾಯಾಗಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ.

ನೀರಿನ ಟ್ಯಾಂಕ್ ಸ್ಫೋಟಗೊಂಡು ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.