ಬ್ರಿಟನ್ ಪ್ರಧಾನಿ ತೆರೆಸಾ ಮೇ ರಾಜೀನಾಮೆಗೆ ನಿರ್ಧಾರ

ಬ್ರಿಟನ್ ಪ್ರಧಾನಿ ತೆರೆಸಾ ಮೇ ರಾಜೀನಾಮೆಗೆ ನಿರ್ಧಾರ

HSA   ¦    May 24, 2019 05:30:08 PM (IST)
ಬ್ರಿಟನ್ ಪ್ರಧಾನಿ ತೆರೆಸಾ ಮೇ ರಾಜೀನಾಮೆಗೆ ನಿರ್ಧಾರ

ಲಂಡನ್: ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನಲ್ಲಿ ಅನುಮೋದನೆ ಸಿಗದೆ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರು ರಾಜೀನಾಮೆ ನೀಡಲು ನಿರ್ಧಾರಿಸಿರುವರು.

ಜೂನ್ 7ರಂದು ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆಗಳು ಇವೆ. ಪಕ್ಷದ ಒತ್ತಡಕ್ಕೆ ಮಣಿದು ಅವರು ರಾಜೀನಾಮೆ ನೀಡುತ್ತಿದ್ದಾರೆ. ಬೇರೊಬ್ಬ ಪ್ರಧಾನಿಯನ್ನು ಪಕ್ಷವು ಆಯ್ಕೆ ಮಾಡಲಿದೆ.

ತೆರೆಸಾ ಮೇ ಅವರು ಸಂಸತ್ತಿನಲ್ಲಿ ಎರಡು ಸಲ ಬ್ರೆಕ್ಸಿಟ್ ಒಪ್ಪಂದವನ್ನು ಮಂಡನೆ ಮಾಡಿದರೂ ಅವರು ಸೋಲು ಕಂಡಿದ್ದಾರೆ.