ಕೊರೋನಾ ಸೋಂಕು: ದೇಶದಲ್ಲಿ ಮೃತರ ಸಂಖ್ಯೆ 10ಕ್ಕೇರಿಕೆ

ಕೊರೋನಾ ಸೋಂಕು: ದೇಶದಲ್ಲಿ ಮೃತರ ಸಂಖ್ಯೆ 10ಕ್ಕೇರಿಕೆ

HSA   ¦    Mar 24, 2020 03:46:41 PM (IST)
ಕೊರೋನಾ ಸೋಂಕು: ದೇಶದಲ್ಲಿ ಮೃತರ ಸಂಖ್ಯೆ 10ಕ್ಕೇರಿಕೆ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿಗೆ ಮೃತರ ಸಂಖ್ಯೆಯು ಮಾ.24ರಂದು ಎರಡಂಕೆಯನ್ನು ತಲುಪಿದ್ದು, ಮಹಾರಾಷ್ಟ್ರದ 65ರ ಹರೆಯದ ವೃದ್ಧರೊಬ್ಬರು ಇದಕ್ಕೆ ಬಲಿಯಾಗಿರುವರು.

ಸೋಮವಾರ ಇವರನ್ನು ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಇವರು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.

ಈ ವ್ಯಕ್ತಿಯು ಯುಎಇಯಿಂದ ಮರಳಿದ್ದು ಮಾರ್ಚ್ 15ರಂದು ಅಹ್ಮದಾಬಾದ್ ಗೆ ಹೋಗಿ ಅಲ್ಲಿಂದ ಮಾ.20ರಂದು ಮುಂಬಯಿಗೆ ಹಿಂತಿರುಗಿದ್ದರು. ಸೋಮವಾರ ಜ್ವರ ಮತ್ತು ಕೆಮ್ಮು ಇದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.