ಚಿದಂಬರಂ ಜಾಮೀನು ಅರ್ಜಿ: ಏಳು ದಿನಗಳಲ್ಲಿ ವರದಿ ಕೇಳಿದ ಹೈಕೋರ್ಟ್

ಚಿದಂಬರಂ ಜಾಮೀನು ಅರ್ಜಿ: ಏಳು ದಿನಗಳಲ್ಲಿ ವರದಿ ಕೇಳಿದ ಹೈಕೋರ್ಟ್

HSA   ¦    Sep 12, 2019 01:39:55 PM (IST)
ಚಿದಂಬರಂ ಜಾಮೀನು ಅರ್ಜಿ: ಏಳು ದಿನಗಳಲ್ಲಿ ವರದಿ ಕೇಳಿದ ಹೈಕೋರ್ಟ್

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಜಾಮೀನು ಅರ್ಜಿ ಬಗ್ಗೆ ಏಳು ದಿನಗಳಲ್ಲಿ ವರದಿ ನೀಡಬೇಕು ಎಂದು ಕೇಂದ್ರೀಯ ತನಿಖಾ ತಂಡ(ಸಿಬಿಐ)ಕ್ಕೆ ದೆಹಲಿ ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಮುಂದಿನ ವಿಚಾರಣೆಯು ಸಪ್ಟೆಂಬರ್ 23ರಂದು ನಡೆಯಲಿದೆ. ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತನಗೆ ಪೂರ್ಣ ಪ್ರಮಾಣದ ಜಾಮೀನು ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ನಿನ್ನೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಸಪ್ಟೆಂಬರ್ 19ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಸಿಬಿಐ ಕೋರ್ಟ್ ನ ಆದೇಶವನ್ನು ಕೂಡ ಅವರಿಲ್ಲಿ ಪ್ರಶ್ನಿಸಿದ್ದಾರೆ.

ಆಗಸ್ಟ್ 20ರಂದು ಚಿದಂಬರಂ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು.