ಕೋವಿಡ್ ೧೯: ಭಾರತದಲ್ಲಿ ಸೋಂಕಿತರ ಸಂಖ್ಯೆ ೬೩೬, ೧೪ಮಂದಿ ಸಾವು

ಕೋವಿಡ್ ೧೯: ಭಾರತದಲ್ಲಿ ಸೋಂಕಿತರ ಸಂಖ್ಯೆ ೬೩೬, ೧೪ಮಂದಿ ಸಾವು

YK   ¦    Mar 26, 2020 11:01:15 AM (IST)
ಕೋವಿಡ್ ೧೯: ಭಾರತದಲ್ಲಿ ಸೋಂಕಿತರ ಸಂಖ್ಯೆ ೬೩೬, ೧೪ಮಂದಿ ಸಾವು

ನವದೆಹಲಿ: ಕೋವಿಡ್ ೧೯ ಸೋಂಕಿಗೆ ಭಾರತ ಎರಡನೇ ದಿನವೂ ಲಾಕ್ ಡೌನ್ ಆಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ ೬೩೬ಕ್ಕೆ ಏರಿಕೆಯಾಗಿ, ಗುಜರಾತ್ ಹಾಗೂ ಶ್ರೀನಗರದಲ್ಲಿ ಸೋಂಕಿತ ವ್ಯಕ್ತಿಗಳು ಸಾವನ್ನಪ್ಪಿ ಮೃತರ ಸಂಖ್ಯೆ ೧೪ ಏರಿದೆ.

ಇಂದು ಮುಂಬೈ ಹಾಗೂ ಥಾಣೆಯಲ್ಲಿ ಎರಡು ಕೊರೊನಾ ವೈರಸ್ ದೃಢವಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೧೨೪ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ದೃಢಪಡಿಸಿದೆ.

ಶ್ರೀನಗರದಲ್ಲಿ ೬೫ವರ್ಷದ ವ್ಯಕ್ತಿ ಕೋವಿಡ್ ೧೯ ಸೋಂಕಿನಿಂದ ಸಾವನ್ನಪ್ಪಿದ್ದು, ಇದೀಗ ಆತನ ಜತೆಯಿದ್ದ ನಾಲ್ವರಿಗೆ ಕೊರೊನಾ ವೈರಸ್ ಇರುವುದು ದೃಢವಾಗಿದೆ.

ಮಧ್ಯಪ್ರದೇಶದಲ್ಲಿ ಐವರಿಗೆ ಕೊರೊನಾ ವೈರಸ್ ಇರುವುದು ದೃಢವಾಗಿದ್ದು ಸೋಂಕಿತರ ಸಂಖ್ಯೆ ೨೦ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ದೃಢಪಡಿಸಿದೆ.