ಆಂಧ್ರಪ್ರದೇಶದಲ್ಲಿ ತಿತ್ಲಿ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ

ಆಂಧ್ರಪ್ರದೇಶದಲ್ಲಿ ತಿತ್ಲಿ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ

HSA   ¦    Oct 11, 2018 02:54:47 PM (IST)
ಆಂಧ್ರಪ್ರದೇಶದಲ್ಲಿ ತಿತ್ಲಿ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ

ಹೈದರಾಬಾದ್: ತಿತ್ಲಿ ಚಂಡಮಾರುತವು ಆಂಧ್ರಪ್ರದೇಶ ಶ್ರೀಕಾಕುಳಂ ಜಿಲ್ಲೆಯ ಪಲಾಸಾಕ್ಕೆ ಅಪ್ಪಳಿಸಿದ್ದು, ಭೂಕುಸಿತದಿಂದಾಗಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.

ಚಂಡಮಾರುತದ ಅಬ್ಬರಕ್ಕೆ ಹಲವಾರು ಮನೆಗಳಿಗೆ ಹಾನಿಯಾಗಿದೆ ಮತ್ತು ರೈಲು, ವಿಮಾನ ಮತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ. ಪಲಾಸಾ ಜಿಲ್ಲೆಯಲ್ಲಿ ಇಬ್ಬರು ಭೂ ಸಮಾಧಿಯಾಗಿದ್ದಾರೆ.

ಆಂಧ್ರ ಪ್ರದೇಶದ ಇತರ ಐದು ಜಿಲ್ಲೆಗಳಲ್ಲಿ ಕೂಡ ತಿತ್ಲಿ ಚಂಡಮಾರುತದ ಪ್ರಭಾವ ಉಂಟಾಗಿದೆ. ಒಡಿಸ್ಸಾದಲ್ಲೂ ತಿತ್ಲಿಯಿಂದಾಗಿ ಭಾರೀ ಹಾನಿಯುಂಟಾಗಿದೆ. ಒಡಿಸ್ಸಾದ ಐದಕ್ಕೂ ಹೆಚ್ಚು ಜಿಲ್ಲೆಗಳ ಜನರನ್ನು ಸ್ಥಳಾಂತರಿಸಲಾಗಿದೆ.