ಶಾಲೆಯಲ್ಲಿ ಅಗ್ನಿ ಅವಘಡ- 23ಮಕ್ಕಳು ಸೇರಿದಂತೆ 25ಮಂದಿ ಸಾವು

ಶಾಲೆಯಲ್ಲಿ ಅಗ್ನಿ ಅವಘಡ- 23ಮಕ್ಕಳು ಸೇರಿದಂತೆ 25ಮಂದಿ ಸಾವು

Sep 14, 2017 10:57:59 AM (IST)
ಶಾಲೆಯಲ್ಲಿ ಅಗ್ನಿ ಅವಘಡ- 23ಮಕ್ಕಳು ಸೇರಿದಂತೆ 25ಮಂದಿ ಸಾವು

ಕೌಲಾಲಂಪುರ್: ಮಲೇಷಿಯಾ ರಾಜಧಾನಿ ಕೌಲಾಲಂಪುರ್ದಲ್ಲಿನ ಶಾಲೆಯೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 23 ಮಕ್ಕಳು ಸೇರಿದಂತೆ 25 ಮಂದಿ ಸಾವಿಗೀಡಾಗಿದ್ದಾರೆ.

ಇಲ್ಲಿನ ದಾರುಲ್ ಕುರಾನ್ ಇಟಿಫಾಕಿಯಾಹ್ ಶಾಲೆಯಲ್ಲಿ ಇಂದು ಬೆಳಗಿನ ಜಾವ ಈ ಅಗ್ನಿ ದುರಂತ ನಡೆದಿದೆ. ಶಾಲೆಗೆ ಬೆಂಕಿ ಬಿದ್ದ ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ಈ ಘಟನೆಯಲ್ಲಿ ಮೃತರ ಸಂಖ್ಯೆ ಎಷ್ಟು ಎಂಬುದು ಇನ್ನೂ ಖಚಿತವಾಗಿಲ್ಲ. ಸದ್ಯ 23 ಮಕ್ಕಳು ಹಾಗೂ ಮತ್ತಿಬ್ಬರು ಹಿರಿಯರು ಮೃತಪಟ್ಟಿದ್ದು ಖಚಿತಗೊಂಡಿದೆ. ಇವರು ಕೋಣೆಯಲ್ಲಿ ಹೊಗೆ ಆವರಿಸಿ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿರುವ ಶಂಕೆ ಇದೆ ಎಂದು ಕೌಲಾ ಲಂಪುರ್ನ ಅಗ್ನಿಶಾಮಕ ದಳ ನಿರ್ದೇಶಕರು ಹೇಳಿದ್ದಾರೆ.

ಈ ಭೀಕರ ದುರಂತ 2 ದಶಕದಲ್ಲಿಯೇ ಅತಿ ದೊಡ್ಡ ಬೆಂಕಿ ದುರಂತವಾಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.