ವಿಕ್ರಮ್ ಲ್ಯಾಂಡರ್ ಪತ್ತೆ: ಸಂಪರ್ಕಕ್ಕೆ ಪ್ರಯತ್ನಿಸುತ್ತಿರುವ ಇಸ್ರೋ

ವಿಕ್ರಮ್ ಲ್ಯಾಂಡರ್ ಪತ್ತೆ: ಸಂಪರ್ಕಕ್ಕೆ ಪ್ರಯತ್ನಿಸುತ್ತಿರುವ ಇಸ್ರೋ

YK   ¦    Sep 10, 2019 04:09:05 PM (IST)
ವಿಕ್ರಮ್ ಲ್ಯಾಂಡರ್ ಪತ್ತೆ: ಸಂಪರ್ಕಕ್ಕೆ ಪ್ರಯತ್ನಿಸುತ್ತಿರುವ ಇಸ್ರೋ

ನವದೆಹಲಿ: ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಿರುವುದನ್ನು ಆರ್ಬಿಟರ್ ಪತ್ತೆ ಹಚ್ಚಿದೆ. ಇದೀಗ ಲ್ಯಾಂಡರ್ ಜತೆ ಸಂಪರ್ಕ ಸಾಧಿಸುವ ಪ್ರಯತ್ನ ಮುಂದುವರೆದಿದೆ ಎಂದು ಇಸ್ರೋ ಟ್ವೀಟ್ ಮಾಡಿ ಮಂಗಳವಾರ ತಿಳಿಸಿದೆ.

ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರು ಪ್ರತಿಕ್ರಿಯಿಸಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಿರುವುದಾಗಿ ತಿಳಿಸಿದ್ದಾರೆ. ಅದಲ್ಲದೆ ಸಂಪರ್ಕ ಸಾಧಿಸುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.