ಯುವತಿಗೆ ಥಳಿಸಿದ ಪೊಲೀಸ್ ಅಧಿಕಾರಿ ಪುತ್ರನ ಸೆರೆ

ಯುವತಿಗೆ ಥಳಿಸಿದ ಪೊಲೀಸ್ ಅಧಿಕಾರಿ ಪುತ್ರನ ಸೆರೆ

HSA   ¦    Sep 14, 2018 06:37:21 PM (IST)
ಯುವತಿಗೆ ಥಳಿಸಿದ ಪೊಲೀಸ್ ಅಧಿಕಾರಿ ಪುತ್ರನ ಸೆರೆ

ನವದೆಹಲಿ: ಖಾಸಗಿ ಕಚೇರಿಯೊಂದರಲ್ಲಿ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿ, ಆಕೆಯ ಕೂದಲು ಹಿಡಿದು ಎಳೆದು ನೆಲಕ್ಕೆ ಅಪ್ಪಳಿಸಿದ ಪೊಲೀಸ್ ಅಧಿಕಾರಿಯೊಬ್ಬರ ಪುತ್ರನನ್ನು ಬಂಧಿಸಲಾಗಿದೆ.

ದೆಹಲಿ ಪೊಲೀಸ್ ಅಧಿಕಾರಿಯ ಮಗ ರೋಹಿತ್ ತೋಮರ್ ಎಂಬಾತನೇ ಈ ಕೃತ್ಯವೆಸಗಿದ್ದಾನೆ. ಈ ಕೃತ್ಯದ ವಿಡಿಯೋ ವೈರಲ್ ಆದ ಬಳಿಕ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವರಾಗಿರುವ ರಾಜನಾಥ್ ಸಿಂಗ್ ಅವರು ಆದೇಶಿಸಿದ್ದರು.

ಯುವತಿಗೆ ಥಳಿಸುವ ವಿಡಿಯೋವನ್ನು ಚಿತ್ರೀಕರಿಸಲಾಗುತ್ತಿದ್ದರೂ ಆತನನ್ನು ತಡೆಯುವಂತಹ ಯತ್ನ ಯಾರು ಮಾಡದೆ ಇರುವುದು ಭಾರೀ ಅಚ್ಚರಿಯನ್ನು ಉಂಟು ಮಾಡಿದೆ.

ಹಣಕಾಸಿನ ವಿಚಾರವಾಗಿ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಹಲ್ಲೆಗೊಳಗಾದ ಯುವತಿ ಕೂಡ ಈ ಬಗ್ಗೆ ದೂರು ನೀಡಿದ್ದಾಳೆ. ಆದರೆ ವಿಡಿಯೋ ನೋಡಿದ ಬಳಿಕ ತೋಮರ್ ನ್ನು ಮದುವೆಯಾಗಬೇಕಿದ್ದ ಹುಡುಗಿಯೇ ಮೊದಲು ಪೊಲೀಸರಿಗೆ ದೂರು ನೀಡಿದ್ದಾಳೆ. ಮದುವೆ ಕೂಡ ಮುರಿದುಕೊಂಡಿರುವುದಾಗಿ ಆಕೆ ಹೇಳಿದ್ದಾಳೆ.