ಯಮುನಾ ನದಿಯಲ್ಲಿ 60ಜನರಿದ್ದ ದೋಣಿ ಮಗುಚಿ – 19 ಸಾವು

ಯಮುನಾ ನದಿಯಲ್ಲಿ 60ಜನರಿದ್ದ ದೋಣಿ ಮಗುಚಿ – 19 ಸಾವು

Sep 14, 2017 12:05:34 PM (IST)
ಯಮುನಾ ನದಿಯಲ್ಲಿ 60ಜನರಿದ್ದ ದೋಣಿ ಮಗುಚಿ – 19 ಸಾವು

ಲಕ್ನೋ: ಉತ್ತರಪ್ರದೇಶದ ಭಾಗ್ಪತ್ ಬಳಿ 60 ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಯಮುನಾ ನದಿಯಲ್ಲಿ ಮಗುಚಿ ಬಿದ್ದ ಪರಿಣಾ ಮ ಅವಘಡದಲ್ಲಿ ಸುಮಾರು 19 ಜನ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇನ್ನಷ್ಟು ಮಂದಿ ಮುಳುಗಿರುವ ಆತಂಕ ವ್ಯಕ್ತವಾಗಿದೆ.

ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಕೊಂಡೊಯ್ಯುತ್ತಿದ್ದುದ್ದರಿಂದ ಮಗುಚಿಬಿದ್ದಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದು, ಈಗಾಗಲೇ 12 ಮಂದಿಯನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ಸಂದರ್ಭದಲ್ಲಿ ಜನರಿಂದ ಕಕ್ಕಿರಿದಿದ್ದ ದೋಣಿ ಹರಿಯಾಣ ಕಡೆಗೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

More Images