ಮತ್ತೇ ಅಟ್ಟಹಾಸ ಮೆರೆದ ನಕ್ಸಲರು: ನಾಲ್ವರು ಬಲಿ

ಮತ್ತೇ ಅಟ್ಟಹಾಸ ಮೆರೆದ ನಕ್ಸಲರು: ನಾಲ್ವರು ಬಲಿ

YK   ¦    Nov 08, 2018 02:47:08 PM (IST)

ರಾಯಪುರ: ದಂತೇವಾಡದ ಬಳಿ ಗುರುವಾರ ನಕ್ಸಲರು ಹುದುಗಿಸಿಟ್ಟ ಬಾಂಬ್ ಸ್ಫೋಟಕ್ಕೆ ಬಸ್ ನಲ್ಲಿದ್ದ ನಾಲ್ವರು ಬಲಿಯಾದ ಘಟನೆ ನಡೆದಿದೆ. ಬಲಿಯಾರ=ಮತ್ತೆ ಅಟ್ಟಹಾಸ ಮೆರೆದಿದ್ದು, ಅವರು ಹುದುಗಿಸಿಟ್ಟಿದ್ದ ಸುಧಾರಿತ ಬಾಂಬ್‌ ಸ್ಫೋಟಕ್ಕೆ ಬಸ್‌ನಲ್ಲಿದ್ದ ನಾಲ್ವರು ಬಲಿಯಾಗಿದ್ದಾರೆ.

ಮೂವರು ನಾಗರಿಕರು ಮತ್ತು ಕೇಂದ್ರ ಕೈಗಾರಿಕ ಮೀಸಲು ಪಡೆಯ (ಸಿಐಎಸ್ಎಫ್) ಯೋಧರೊಬ್ಬರು ಬಲಿಯಾಗಿದ್ದಾರೆ ಎಂದು ಪೊಲೀಸರಿಂದ ತಿಳಿದುಬಂದಿದೆ.

ನಕ್ಸಲರು ದಂತೇವಾಡ ಸಮೀಪದ ಬಚೇಲಿ ಗುಡ್ಡಗಾಡು ಪ್ರದೇಶದ ರಸ್ತೆಯಲ್ಲಿ ಸುಧಾರಿತ ನೆಲಬಾಂಬ್ ಅನ್ನು ಹುದುಗಿಸಿಟ್ಟಿದ್ದರು. ಬಸ್‌ನಲ್ಲಿ ಯೊಧರು ಇರುವುದನ್ನು ಖಚಿತಪಡಿಸಿಕೊಂಡು ನಕ್ಸಲರು ಬಸ್‌ ಹಾದು ಹೋಗುವ ಸಮಯದಲ್ಲಿ  ಬಾಂಬ್‌ ಸ್ಫೋಟಿಸಿದ್ದಾರೆ ಘಟನೆಯಲ್ಲಿ ಬಸ್‌ ಚಾಲಕ, ನಿರ್ವಾಹಕ, ಕ್ಲಿನರ್ ಹಾಗೂ ಸಿಐಎಸ್ಎಫ್ ಯೋಧ ಮೃತಪಟ್ಟಿದ್ದಾನೆ.