ನಟಿ ದೀಪಿಕಾ ಪಡುಕೋಣೆ ವಾಸವಿರುವ ಕಟ್ಟಡಕ್ಕೆ ಬೆಂಕಿ!

ನಟಿ ದೀಪಿಕಾ ಪಡುಕೋಣೆ ವಾಸವಿರುವ ಕಟ್ಟಡಕ್ಕೆ ಬೆಂಕಿ!

HSA   ¦    Jun 13, 2018 03:50:33 PM (IST)
ನಟಿ ದೀಪಿಕಾ ಪಡುಕೋಣೆ ವಾಸವಿರುವ ಕಟ್ಟಡಕ್ಕೆ ಬೆಂಕಿ!

ಮುಂಬಯಿ: ನಟಿ ದೀಪಿಕಾ ಪಡುಕೋಣೆ ವಾಸವಿರುವ ಬಹುಮಹಡಿ ಕಟ್ಟಡ ವರ್ಲಿಯ ಬ್ಯೂಮಾಂಡ್ ಟವರ್ ಗೆ ಬೆಂಕಿ ಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ವರದಿಗಳು ಹೇಳಿವೆ.

ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಇದುವರೆಗೆ ಸುಮಾರು 95 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ದೀಪಿಕಾ ಸಹಿತ ಕೆಲವು ಸ್ಟಾರ್ ಗಳು ಈ ಕಟ್ಟಡದಲ್ಲಿ ವಾಸವಾಗಿದ್ದಾರೆ. ದೀಪಿಕಾ 26ನೇ ಮಹಡಿಯಲ್ಲಿ ಪ್ಲ್ಯಾಟ್ ಹೊಂದಿದ್ದಾರೆ.

ಬುಧವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆ 32-33ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಸುಮಾರು 21 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.