ಬಿಜೆಪಿ ರಥಯಾತ್ರೆಗೆ ಕೊಲ್ಕತ್ತಾ ಹೈಕೋರ್ಟ್ ನಿಂದ ಅನುಮತಿ ನಿರಾಕರಣೆ

ಬಿಜೆಪಿ ರಥಯಾತ್ರೆಗೆ ಕೊಲ್ಕತ್ತಾ ಹೈಕೋರ್ಟ್ ನಿಂದ ಅನುಮತಿ ನಿರಾಕರಣೆ

HSA   ¦    Dec 06, 2018 05:32:05 PM (IST)
ಬಿಜೆಪಿ ರಥಯಾತ್ರೆಗೆ ಕೊಲ್ಕತ್ತಾ ಹೈಕೋರ್ಟ್ ನಿಂದ ಅನುಮತಿ ನಿರಾಕರಣೆ

ನವದೆಹಲಿ: ಬಿಜೆಪಿಯು ಚೂಚೆಬೆಹಾರ್ ನಿಂದ ನಡೆಸಲು ಉದ್ದೇಶಿಸಿದ್ದ ರಥಯಾತ್ರೆಗೆ ಕೊಲ್ಕತ್ತಾ ಹೈಕೋರ್ಟ್ ಅನುಮತಿ ನೀಡಲು ನಿರಾಕರಿಸಿದೆ ಎಂದು ವರದಿಗಳು ಹೇಳಿವೆ.

ಕೋಮುಗಲಭೆ ಉಂಟು ಮಾಡುವ ಸಾಧ್ಯತೆಯು ಇರುವ ಕಾರಣದಿಂದಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಡೆಸಲು ಉದ್ದೇಶಿಸಿರುವ ಯಾತ್ರೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಹೈಕೋರ್ಟ್ ಗೆ ಪಶ್ಚಿಮ ಬಂಗಾಳ ಸರ್ಕಾರವು ಹೇಳಿತ್ತು.

ರಥಯಾತ್ರೆಯಿಂದಾಗಿ ಕೋಮುಗಲಭೆ ಉಂಟಾಗಬಹುದು ಎಂದು ಪಶ್ಚಿಮ ಬಂಗಾಳ ಸರ್ಕಾರ ಪರ ವಕೀಲ ಕಿಶೋರ್ ದತ್ತ್ ತಿಳಿಸಿದ್ದಾರೆ.

ಆಕಸ್ಮಿಕವಾಗಿ ಏನಾದರೂ ನಡೆದರೆ ಇದಕ್ಕೆ ಕಾರಣ ಯಾರು ಎಂದು ಬಿಜೆಪಿಯ ವಕೀಲ ಅನಿನದ್ಯ ಮಿತ್ರಾ ಅವರಲ್ಲಿ ನ್ಯಾಯಾಧೀಶರು ಕೇಳಿದರು. ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕೆಲಸ ಎಂದು ಅವರು ತಿಳಿಸಿದರು.

ಅನುಮತಿ ನಿರಾಕರಣೆ ಮಾಡಿರುವ ವಿರುದ್ಧ ಮತ್ತೆ ಮೇಲ್ಮನವಿ ಸಲ್ಲಿಸಿರುವುದಾಗಿ ಬಿಜೆಪಿ ವಕೀಲರು ತಿಳಿಸಿದ್ದಾರೆ.

ಜನವರಿ 9ರಂದು ಕೊಲ್ಕತ್ತಾ ಹೈಕೋರ್ಟ್ ಮತ್ತೆ ಇದರ ವಿಚಾರಣೆ ನಡೆಸಲಿದೆ.