೮ ಗಂಟೆಗೆ ಮುನ್ನಾ ಪಟಾಕಿ ಸಿಡಿಸಿದವರ ವಿರುದ್ಧ ಕೇಸ್ ದಾಖಲಿಸಿದ ದೆಹಲಿ ಪೊಲೀಸರು

೮ ಗಂಟೆಗೆ ಮುನ್ನಾ ಪಟಾಕಿ ಸಿಡಿಸಿದವರ ವಿರುದ್ಧ ಕೇಸ್ ದಾಖಲಿಸಿದ ದೆಹಲಿ ಪೊಲೀಸರು

YK   ¦    Nov 08, 2018 04:23:19 PM (IST)
೮ ಗಂಟೆಗೆ  ಮುನ್ನಾ ಪಟಾಕಿ ಸಿಡಿಸಿದವರ ವಿರುದ್ಧ ಕೇಸ್ ದಾಖಲಿಸಿದ ದೆಹಲಿ ಪೊಲೀಸರು

ನವದೆಹಲಿ: ಸುಪ್ರೀಂ ಕೋರ್ಟಿನ ಆದೇಶವನ್ನು ಮೀರಿದವರ ವಿರುದ್ಧ ಕೋರ್ಟ್ ನ ಆದೇಶದಂತೆ ದೆಹಲಿ ಪೊಲೀಶರು ದಿಟ್ಟ ಕ್ರಮವನ್ನು ಕೈಗೊಂಡಿದ್ದಾರೆ.

ಬುಧವಾರದ ‘ಬಡೀ ದಿವಾಲಿ’ (ದೊಡ್ಡ ದೀಪಾವಳಿ) ಯಂದು ಅಕ್ರಮವಾಗಿ ಪಟಾಕಿ ಮಾರಾಟ ಮಾಡಿದವರು ಮತ್ತು ರಾತ್ರಿ 8 ಗಂಟೆಗೂ ಮುನ್ನ ಪಟಾಕಿ ಸಿಡಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ನಗರೆದ ೧೦೦ಕ್ಕೂ ಅಧಿಕ ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು ಸುಮಾರು ೬೦೦ ಕೆಜಿಯಷ್ಟು ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದಲ್ಲದೆ ಪರವಾನಗಿ ಇಲ್ಲದೆ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದ ೧೪೦ ಕೆ,ಜಿ. ಪಟಾಕಿ ವಶಪಡಿಸಿಕೊಂಡಿದ್ದು ೫೭ ಜನರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

ಇನ್ನು ದ್ವಾರಕದಲ್ಲಿ ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದ ಮತ್ತು ರಾತ್ರಿ 8 ಗಂಟೆಗೂ ಮುನ್ನ ಪಟಾಕಿ ಸಿಡಿಸಿದವರು ಸೇರಿ 42 ಮಂದಿ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಆಗ್ನೇಯ ದೆಹಲಿಯಲ್ಲಿ ಪೊಲೀಸರು 23 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, 17 ಜನರನ್ನು ಬಂಧಿಸಿದ್ದಾರೆ. ಜೊತೆಗೆ 278 ಕೆ.ಜಿ ಪಟಾಕಿಯನ್ನು ವಶ ಪಡಿಸಿಕೊಂಡಿದ್ದಾರೆ.