ಕೋಚಿಂಗ್ ಸೆಂಟರ್ ಗೆ ಬೆಂಕಿ: ಸುಟ್ಟು ಕರಕಲಾದ 17 ವಿದ್ಯಾರ್ಥಿಗಳು

ಕೋಚಿಂಗ್ ಸೆಂಟರ್ ಗೆ ಬೆಂಕಿ: ಸುಟ್ಟು ಕರಕಲಾದ 17 ವಿದ್ಯಾರ್ಥಿಗಳು

HSA   ¦    May 24, 2019 07:48:01 PM (IST)
ಕೋಚಿಂಗ್ ಸೆಂಟರ್ ಗೆ ಬೆಂಕಿ: ಸುಟ್ಟು ಕರಕಲಾದ 17 ವಿದ್ಯಾರ್ಥಿಗಳು

ಸೂರತ್: ಕೋಚಿಂಗ್ ಸೆಂಟರ್ ನಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅನಾಹುತದಿಂದಾಗಿ 17 ಮಂದಿ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.

ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್ ನಲ್ಲಿ ಇದ್ದ ವೇಳೆ ಬೆಂಕಿ ಬಿದ್ದಿದೆ. ಇದರಿಂದ ತಪ್ಪಿಸಿಕೊಳ್ಳಲು ಆಗದೆ ಬೆಂಕಿಯ ಜ್ವಾಲೆಯಲ್ಲಿ ಜೀವಂತ ಸಮಾಧಿಯಾಗಿದ್ದಾರೆ.

ಸೂರತ್ ನ ಸರ್ತಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಣ್ಣ ಕೊಠಡಿಯಲ್ಲಿ ನಡೆಯುತ್ತಿದ್ದ ಕೋಚಿಂಗ್ ಸೆಂಟರ್ ನಲ್ಲಿ ಈ ಅವಘಡ ನಡೆದಿದೆ. ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರೂ ವಿಫಲರಾದರು. ಅಗ್ನಿಶಾಮಕ ದಳದವರು ಬರುವ ವೇಳೆಗೆ ವಿದ್ಯಾರ್ಥಿಗಳು ಬೆಂಕಿಗೆ ಸಿಲುಕಿದ್ದರು.

ವಿದ್ಯಾರ್ಥಿಗಳು ಬೆಂಕಿಗೆ ಸಿಲುಕಿರುವ ಸುದ್ದಿ ತಿಳಿದು ಆಗಮನಿಸಿದ ಪೋಷಕರು ಹಾಗೂ ಸಂಬಂಧಿಕರ ರೋಧನವು ಮುಗಿಲು ಮುಟ್ಟಿದೆ.

ಕೋಚಿಂಗ್ ಸೆಂಟರ್ ನಡೆಸುತ್ತಿದ್ದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಆದೇಶಿಸಿದ್ದಾರೆ. ಇದೇ ವೇಳೆ ನಾಲ್ಕು ಲಕ್ಷ ರೂ. ಪರಿಹಾರ ಕೂಡ ಘೋಷಿಸಿದ್ದಾರೆ.