ಬಾಬಾ ರಹೀಂ, ರಾಧೆ ಮಾ, ಅಸರಾಂ ಬಾಪು ರನ್ನು ನಕಲಿ ಬಾಬಾಗಳ ಪಟ್ಟಿಗೆ ಸೇರಿಸಿ: ಅಖಿಲ ಭಾರತೀಯ ಅಖರ ಪರಿಷತ್

ಬಾಬಾ ರಹೀಂ, ರಾಧೆ ಮಾ, ಅಸರಾಂ ಬಾಪು ರನ್ನು ನಕಲಿ ಬಾಬಾಗಳ ಪಟ್ಟಿಗೆ ಸೇರಿಸಿ: ಅಖಿಲ ಭಾರತೀಯ ಅಖರ ಪರಿಷತ್

Sep 10, 2017 05:59:14 PM (IST)
ಬಾಬಾ ರಹೀಂ, ರಾಧೆ ಮಾ, ಅಸರಾಂ ಬಾಪು ರನ್ನು ನಕಲಿ ಬಾಬಾಗಳ ಪಟ್ಟಿಗೆ ಸೇರಿಸಿ: ಅಖಿಲ ಭಾರತೀಯ ಅಖರ ಪರಿಷತ್

ಹೊಸದಿಲ್ಲಿ: ಸ್ವಯಂಘೋಷಿತ ದೇವಮಾನವರಾದ ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಬಾಬಾ ರಹೀಂ, ಅಸರಾಂ ಬಾಪು, ರಾಧೆ ಮಾ, ರಂತಹ ಬಾಬಾಗಳನ್ನು ನಕಲಿ ಬಾಬಾಗಳ ಪಟ್ಟಿಗೆ ಸೇರಿಸಬೇಕು ಎಂದು ಅಖಿಲ ಭಾರತೀಯ ಅಖರ ಪರಿಷತ್ ಭಾನುವಾರ ಹೇಳಿದೆ.

ಅಖರ ಪರಿಷತ್ 14 ಸ್ವಯಂಘೋಷಿತ ದೇವಮಾನವರನ್ನು ಪಟ್ಟಿ ಮಾಡಿ ಈ ನಕಲಿ ಬಾಬಾಗಳ ವಿರುದ್ಧ ಕ್ರಮಕ್ಕೆ ಕಾನೂನು ರಚಿಸುವಂತೆ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ಅಖರ ಪರಿಷತ್ ನ ಅಧ್ಯಕ್ಷ ನರೇಂದ್ರ ಗಿರಿ ಅವರು, ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಮ್ಮ ಸಮಾಜದಲ್ಲಿ ಹಲವು ನಕಲಿ ಬಾಬಾ ಗಳಿದ್ದಾರೆ. ಅವರನ್ನು ನಾವು ಬಾಬಾ ಎಂಬ ಪದದಿಂದ ಕರೆಯಬಾರದು. ಇವರಿಂದ ಅಸಲಿ ಗುರುಗಳನ್ನೂ ಕೂಡ ಜನರ ಶಂಕೆಯಿಂದ ನೋಡುವಂತಾಗಿದೆ. ಹೀಗಾಗಿ ನಮ್ಮ ಸಮಿತಿ 14 ಮಂದಿ ನಕಲಿ ಬಾಬಾಗಳನ್ನು ಗುರುತಿಸಿದ್ದು, ಇವರನ್ನು ಇನ್ನು ಮುಂದೆ ಬಾಬಾಗಳೆಂದು ಕರೆಯಬಾರದು ಎಂದು ತೀರ್ಮಾನಿಸಿದೆ.

ಇಂತಹ ನಕಲಿ ಬಾಬಾಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈ ಸ್ವಯಂಘೋಷಿತ ದೇವಮಾನವರ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡು ಇವರಲ್ಲೆರನ್ನೂ ಜೈಲಿಗಟ್ಟಬೇಕು ಎಂದು ತಿಳಿಸಿದೆ.

14 ನಕಲಿ ಬಾಬಾಗಳ ಪಟ್ಟಿ ಇಂತಿದೆ:
1.ಆಸರಾಮ್ ಬಾಪು
2.ರಾಧೇ ಮಾ (ಸುಖ್ವೀಂದರ್ ಕೌರ್)
3.ಸಚ್ದಾರಂಗಿ
4.ಗುರ್ಮಿತ್ ರಾಮ್ ರಹೀಮ್ ಸಿಂಗ್
5.ಓಂ ಬಾಬಾ ಅಕಾ ವಿವೇಕಾನಂದ
6.ನಿರ್ಮಲ್ ಬಾಬಾ
7.ಇಚ್ಛಾಧಾರಿ ವಿಶ್ವನಾಂದ್
8.ಸ್ವಾಮಿ ಅಸ್ಮಿಯಾನಂದ್
9.ಸ್ವಾಮಿ ಓಂ ನಮಃ ಶಿವಾಯ್
10.ನಾರಾಯಣ್ ಸಾಯಿ ರಾಮ್ ಪಾಲ್