ಉತ್ತರಾಖಂಡ: ಕುಂಭದ್ರೋಣ ಮಳೆಗೆ ಏಳು ಮಂದಿ ಮೃತ್ಯು

ಉತ್ತರಾಖಂಡ: ಕುಂಭದ್ರೋಣ ಮಳೆಗೆ ಏಳು ಮಂದಿ ಮೃತ್ಯು

HSA   ¦    Jul 11, 2018 11:49:45 AM (IST)
ಉತ್ತರಾಖಂಡ: ಕುಂಭದ್ರೋಣ ಮಳೆಗೆ ಏಳು ಮಂದಿ ಮೃತ್ಯು

ಡೆಹ್ರಾಡೂನ್: ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಉತ್ತರಖಂಡದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ.

ಉತ್ತರಖಂಡದ ಡೆಹ್ರಾಡೂನ್ ನಲ್ಲಿ ಸುಮಾರು ಏಳು ಮಂದಿ ಮೃತಪಟ್ಟಿದ್ದಾರೆ. ಹಲವಾರು ಸೇತುವೆ ಹಾಗೂ ಮನೆಗಳು ಮಳೆಯಿಂದಾಗಿ ಕುಸಿದು ಬಿದ್ದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಡೆಹ್ರಾಡೂನ್ ನಲ್ಲಿ ಕಟ್ಟಡವೊಂದು ಉರುಳಿಬಿದ್ದು ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಮೂರು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ವರದಿಗಳು ಹೇಳಿವೆ.

ಕೆಲವು ಕಡೆ ಭೂಕುಸಿತ ಉಂಟಾಗಿ ರಾಜ್ಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿವೆ. ತೆರವು ಕಾರ್ಯಾಚರಣೆಯು ನಡೆಯುತ್ತಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.