ನವದೆಹಲಿ: ಜಮ್ಮುಕಾಶ್ಮೀರದಿಂದ 370ನೇ ವಿಧಿ ತೆಗೆದಿರುವುದು ಅಸಂವಿಧಾನಿಕ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ.
ಜಮ್ಮು-ಕಾಶ್ಮೀರವನ್ನು ದೇಶದ ಇತರ ರಾಜ್ಯಗಳಿಗೆ ಸಮಾನವಾಗಿ ಕಾಣಬೇಕೆಂದು 370ನೇ ವಿಧಿ ತೆಗೆದು ಹಾಕಿರುವುದು ಅಸಂವಿಧಾನಿಕ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
370ನೇ ವಿಧಿ ತೆಗೆದಿರುವ ವಿಧಾನ ಅಸಂವಿಧಾನಿಕ ಮತ್ತು ಇದು ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ. ಇಂತಹ ವಿಚಾರಗಳಿಗೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಆದರೆ ಹಾಗೆ ಮಾಡಿಲ್ಲ ಎಂದರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದಿಸಲ್ಪಟ್ಟ ವಿಧಿ 370 ಮತ್ತು 35 ಎ ತೆಗೆಯುವ ಗಜೆಟ್ ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಹಿ ಹಾಕಿದ್ದಾರೆ.