91ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಎಲ್.ಕೆ.ಅಡ್ವಾಣಿ: ಮೋದಿಯಿಂದ ಶುಭಾಶಯ

91ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಎಲ್.ಕೆ.ಅಡ್ವಾಣಿ: ಮೋದಿಯಿಂದ ಶುಭಾಶಯ

YK   ¦    Nov 08, 2018 01:19:00 PM (IST)
91ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಎಲ್.ಕೆ.ಅಡ್ವಾಣಿ: ಮೋದಿಯಿಂದ ಶುಭಾಶಯ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರು ಗುರುವಾರ 91ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿಗೆ ಟ್ವಿಟರ್ ನಲ್ಲಿ ಶುಭಾಶಯಕೋರಿ, ಅಡ್ವಾನಿ ಅವರು ನಿಸ್ವಾರ್ಥ, ಕರ್ತವ್ಯಪರ ಮುತ್ಸದ್ಧಿ ಎಂದು ಬರೆದುಕೊಂಡಿದ್ದಾರೆ.

ಅಡ್ವಾಣಿ ಅವರಿಗೆ ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟ್ವಿಟರ್ ನಲ್ಲಿ ಶುಭಾಶಯವನ್ನು ತಿಳಿಸಿದ್ದಾರೆ.