ಜುಲೈ 1ರಿಂದ ಆರ್ ಟಿಜಿಎಸ್, ನೆಫ್ಟ್ ಸೇವೆಗಳ ಶುಲ್ಕ ಮನ್ನಾ

ಜುಲೈ 1ರಿಂದ ಆರ್ ಟಿಜಿಎಸ್, ನೆಫ್ಟ್ ಸೇವೆಗಳ ಶುಲ್ಕ ಮನ್ನಾ

HSA   ¦    Jun 12, 2019 01:44:34 PM (IST)
ಜುಲೈ 1ರಿಂದ ಆರ್ ಟಿಜಿಎಸ್, ನೆಫ್ಟ್ ಸೇವೆಗಳ ಶುಲ್ಕ ಮನ್ನಾ

ಮುಂಬಯಿ: ಜುಲೈ 1ರಿಂದ ಆರ್ ಟಿಜಿಎಸ್ ಮತ್ತು ನೆಫ್ಟ್ ಸೇವೆಗಳ ಸೇವಾ ಶುಲ್ಕ ಸಂಪೂರ್ಣವಾಗಿ ಮನ್ನಾ ಮಾಡಿದ್ದು. ಅದೇ ದಿನದಿಂದ ಇದು ಗ್ರಾಹಕರಿಗೂ ಲಭ್ಯವಾಗಬೇಕು ಎಂದು ಬ್ಯಾಂಕ್ ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಹೇಳಿದೆ.

ಆರ್ ಟಿಜಿಎಸ್ ಮೂಲಕ ಹಲ ವರ್ಗಾವಣೆ ಮಾಡುವುದಕ್ಕೆ ಬ್ಯಾಂಕ್ ಗಳಿಗೆ ಆರ್ ಬಿಐ ಕನಿಷ್ಠ ಶುಲ್ಕ ವಿಧಿಸುತ್ತದೆ. ಆದರೆ ಬ್ಯಾಂಕ್ ಗಳು ಮಾತ್ರ ಗ್ರಾಹಕರಿಗೆ ದೊಡ್ಡ ಮಟ್ಟದ ಶುಲ್ಕ ವಹಿಸುತ್ತಿದೆ.

ಡಿಜಿಟಲ್ ಇಂಡಿಯಾಗೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಬ್ಯಾಂಕ್ ಗಳು ಕೂಡ ಗ್ರಾಹಕರಿಗೆ ಶುಲ್ಕ ವಿಧಿಸಬಾರದು. ಜುಲೈ 1ರಿಂದ ಇದನ್ನು ಜಾರಿ ಮಾಡಬೇಕು ಎಂದು ಆರ್ ಬಿಐ ಸೂಚಿಸಿದೆ.