ಹುಲಿಯ ಘರ್ಜನೆ ಕೇಳಿ 12 ಕೋತಿಗಳಿಗೆ ಹೃದಯಾಘಾತ

ಹುಲಿಯ ಘರ್ಜನೆ ಕೇಳಿ 12 ಕೋತಿಗಳಿಗೆ ಹೃದಯಾಘಾತ

Sep 13, 2017 03:39:20 PM (IST)
ಹುಲಿಯ ಘರ್ಜನೆ ಕೇಳಿ 12 ಕೋತಿಗಳಿಗೆ ಹೃದಯಾಘಾತ

ಲಕ್ನೋ: ಹುಲಿಯ ಘರ್ಜನೆ ಕೇಳಿ 12 ಮಂಗಗಳಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

12 ಕೋತಿಗಳು ಸತ್ತು ಬಿದ್ದಿರುವುದನ್ನ ನೋಡಿ ಸ್ಥಳೀಯರು ಗಾಬರಿಯಾಗಿದ್ದಾರೆ. ಕೋತಿಗಳಿಗೆ ವಿಷ ಹಾಕಿ ಕೊಲ್ಲಲಾಗಿದೆ ಎಂಬ ಅನುಮಾನದ ಮೇರೆಗೆ ಮರಣೋತ್ತರ ಪರೀಕ್ಷೆ ಒಳಪಡಿಸಲಾಗಿತ್ತು. ವರದಿಯಲ್ಲಿ ಎಲ್ಲಾ ಕೋತಿಗಳಿಗೂ ಒಂದೇ ಸಲಕ್ಕೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.

ಕೋಟ್ವಾಲಿ ಮೊಹಮ್ಮದ್ ಪ್ರದೇಶದ ಪಶುವೈದ್ಯರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಹೃದಯಾಘಾತದಿಂದ ಕೋತಿಗಳು ಸಾವನ್ನಪ್ಪಿದ್ದಾವೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ.

ಈ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ಸಂಚರಿಸುವುದರಿಂದ ಹುಲಿಯ ಘರ್ಜನೆ ಕೇಳಿ ಕೋತಿಗಳಿಗೆ ಹೃದಯಾಘಾತವಾಗಿರಬಹುದು ಎಂದು ಪಶುವೈದ್ಯರಾದ ಡಾ. ಸಂಜೀವ್ ಕುಮಾರ್ ಹೇಳಿದ್ದಾರೆ. ಕೋತಿಗಳ ಮೃತದೇಹ ಸೋಮವಾರದಂದು ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಆಗಾಗ ಹುಲಿಗಳು ಸಂಚರಿಸುತ್ತಿದ್ದು, ಕೋತಿಗಳು ಸಾವನ್ನಪ್ಪಿದ ದಿನದಂದೂ ಹುಲಿಗಳ ಸಂದರ್ಭದಲ್ಲೂ ಘರ್ಜನೆ ಕೇಳುತ್ತಿತ್ತು ಎಂದು ಇಲ್ಲಿನ ಗ್ರಾಮಸ್ಥರು ಹೇಳಿದ್ದಾರೆ.

ಆದರೆ ಕೋತಿಗಳಿಗೆ ಒಂದೇ ಬಾರಿಗೆ ಹೃದಯಾಘಾತವಾಗಿದೆ ಎಂಬ ಅಂಶವನ್ನು ವನ್ಯಜೀವಿ ತಜ್ಞರು ತಳ್ಳಿ ಹಾಕಿದ್ದಾರೆ. ಇನ್ಫೆಕ್ಷನ್ನಿಂದಾಗಿ ಕೋತಿಗಳು ಸಾವನ್ನಪಿರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಕೋತಿಗಳು ಕಾಡು ಪ್ರಾಣಿಗಳು. ಅವು ಈ ರೀತಿ ಸಾವನ್ನಪ್ಪಲು ಸಾಧ್ಯವಿಲ್ಲ. ಎಲ್ಲಾ ಕೋತಿಗಳೂ ಯಾವುದೋ ಒಂದು ಇನ್ಫೆಕ್ಷನ್ನಿಂದ ಬಳಲಿ ಸಾವನ್ನಪ್ಪಿರಬಹುದು ಎಂದು ಪಶುವೈದ್ಯರಾದ ಡಾ. ಬ್ರಿಜೆಂದ್ರ ಸಿಂಗ್ ಹೇಳಿದ್ದಾರೆ.