ಮಂಡ್ಯ: ಹಾವು ಕಚ್ಚಿ ವಿದ್ಯಾರ್ಥಿನಿ ಸಾವು

ಮಂಡ್ಯ: ಹಾವು ಕಚ್ಚಿ ವಿದ್ಯಾರ್ಥಿನಿ ಸಾವು

LK   ¦    Aug 12, 2017 12:47:44 PM (IST)
ಮಂಡ್ಯ: ಹಾವು ಕಚ್ಚಿ ವಿದ್ಯಾರ್ಥಿನಿ ಸಾವು

ಮಂಡ್ಯ:ಮನೆಯ ಹೊರಗಿದ್ದ ಶೌಚಾಲಯಕ್ಕೆ ರಾತ್ರಿವೇಳೆ ತೆರಳಿದ ಸಂದರ್ಭ ಹಾವು ಕಚ್ಚಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಭಾರತೀನಗರದ ಹೊನ್ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.ಹಾವು ಕಚ್ಚಿ ಮೃತಪಟ್ಟ ವಿದ್ಯಾರ್ಥಿನಿ ಗ್ರಾಮದ ಗ್ರಾಮದ ಉಮಾಕೆಂಚೇಗೌಡ ಎಂಬುವರ ಪುತ್ರಿ ಎಚ್.ಕೆ.ಅರ್ಪಿತಾ  (20). ಈಕೆ ಭಾರತೀನಗರದ  ಭಾರತಿ ಕಾಲೇಜಿನಲ್ಲಿ ಇಂಜಿನಿಯರ್ ವಿಭಾಗದ ಇಎಂಸಿ 3ನೇ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದಳು.

ಎಂದಿನಂತೆ ರಾತ್ರಿ ವೇಳೆ ಈಕೆ ಮನೆಯಿಂದ ಅನತಿ ದೂರದಲ್ಲಿದ್ದ ಶೌಚಾಲಯಕ್ಕೆ ತೆರಳಿದ್ದಳು ಈ ವೇಳೆ ಶೌಚಾಲಯದ ಬಳಿಯಿದ್ದ ಹಾವನ್ನು ನೋಡದೆ ತುಳಿದ ಪರಿಣಾಮ ಅದು ಆಕೆ ಕಾಲಿಗೆ ಕಚ್ಚಿದೆ. ಆಕೆಗೆ ಏನೋ ಕಚ್ಚಿದ ಅನುಭವವಾದ ಕಾರಣ ಜೋರಾಗಿ ಕಿರುಚಿಕೊಂಡಿದ್ದಾಳೆ.ತಕ್ಷಣ ಆಕೆಯತ್ತ ಧಾವಿಸಿದ ಮನೆಯವರು ಪರಿಶೀಲಿಸಿದಾಗ ಹಾವು ಕಚ್ಚಿರುವುದು ಗೊತ್ತಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದ್ದಾರೆ. ಆದರೆ  ಪ್ರಥಮ ಚಿಕಿತ್ಸೆ ಮಾಡದ ಪರಿಣಾಮ ಅದಾಗಲೇ ಹಾವಿನ ವಿಷ ದೇಹವನ್ನು ಪಸರಿಸಿ ಆಕೆ ಮೃತಪಟ್ಟಿದ್ದಾಳೆ.