ಕೈದಿಗಳ ಬಿಡುಗಡೆಗೆ ಕೇರಳ ಸರ್ಕಾರ ಹೊರಡಿಸಿದ್ದ ಆದೇಶ ರದ್ದು

ಕೈದಿಗಳ ಬಿಡುಗಡೆಗೆ ಕೇರಳ ಸರ್ಕಾರ ಹೊರಡಿಸಿದ್ದ ಆದೇಶ ರದ್ದು

HSA   ¦    Jan 11, 2019 08:19:14 PM (IST)
ಕೈದಿಗಳ ಬಿಡುಗಡೆಗೆ ಕೇರಳ ಸರ್ಕಾರ ಹೊರಡಿಸಿದ್ದ ಆದೇಶ ರದ್ದು

ಕೊಚ್ಚಿ: ಜೈಲು ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಸುಮಾರು 209 ಕೈದಿಗಳನ್ನು ಬಿಡುಗಡೆಗೊಳಿಸುವ ಬಗ್ಗೆ 2011ರಲ್ಲಿ ಎಲ್ ಡಿಎಫ್ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ.

ಕೇರಳ ಸರ್ಕಾರದ ಆದೇಶವನ್ನು ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಹೃಷಿಕೇಶ್ ರಾಯ್ ನೇತೃತ್ವದ ಪೂರ್ಣ ಪೀಠವು ರದ್ದು ಮಾಡಿದೆ.

ಈ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಕೋರ್ಟ್, ಆರು ತಿಂಗಳ ಒಳಗಡೆ ಎಲ್ಲಾ ಕೈದಿಗಳ ಪೂರ್ಣ ಮಾಹಿತಿ ಪರಿಶೀಲಿಸಿ, ಬಿಡುಗಡೆಗೆ ಅರ್ಹರಲ್ಲದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು, ಜೈಲು ಶಿಕ್ಷೆ ಅವಧಿ ಪೂರ್ಣಗೊಳಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.