ಉಗ್ರರ ದಾಳಿಗೆ ಮೂವರು ಸಿಆರ್ ಪಿಎಫ್ ಜವಾನರು ಹುತಾತ್ಮ

ಉಗ್ರರ ದಾಳಿಗೆ ಮೂವರು ಸಿಆರ್ ಪಿಎಫ್ ಜವಾನರು ಹುತಾತ್ಮ

HSA   ¦    Jun 12, 2019 06:40:32 PM (IST)
ಉಗ್ರರ ದಾಳಿಗೆ ಮೂವರು ಸಿಆರ್ ಪಿಎಫ್ ಜವಾನರು ಹುತಾತ್ಮ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ನಲ್ಲಿ ಬುಧವಾರ ಸಂಜೆ ನಡೆದಿರುವಂತಹ ಉಗ್ರರ ದಾಳಿಯಲ್ಲಿ ಮೂರು ಮಂದಿ ಸಿಆರ್ ಪಿಎಫ್ ಜವಾನರು ಹುತಾತ್ಮರಾಗಿದ್ದಾರೆ.

ಮಹಿಳೆ ಮತ್ತು ಜಮ್ಮು ಕಾಶ್ಮೀರ ಸ್ಟೇಷನ್ ಹೌಸ್ ಆಫೀಸರ್ ಸಹಿತ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನಾ ಪಡೆಗಳು ಒಬ್ಬ ಉಗ್ರನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಅನಂತನಾಗ್ ನಲ್ಲಿರುವ ಬಸ್ ನಿಲ್ದಾಣದ ಗೀ ಗಾಲಿಯಲ್ಲಿ ಈ ಘಟನೆಯು ನಡೆದಿದೆ. ಎರಡು ವಾಹನಗಳಲ್ಲಿ ಬಂದ ಉಗ್ರರು ಸಿಆರ್ ಪಿಎಫ್ ಜವಾನರ ಮೇಲೆ ದಾಳಿ ನಡೆಸಿದ್ದಾರೆ. ಪ್ರತಿದಾಳಿ ನಡೆಸಿರುವ ಸೇನೆ ಒಬ್ಬ ಉಗ್ರನನ್ನು ಹತ್ಯೆ ಮಾಡಿದೆ. ಇನ್ನೂ ಗುಂಡಿನ ದಾಳಿ ಜಾರಿಯಲ್ಲಿದೆ.

ಈ ವೇಳೆ ಅನಂತನಾಗ್ ನ ಪೊಲೀಸ್ ಸ್ಟೇಷನ್ ಎಸ್ ಎಚ್ ಒ ಅರ್ಷದ್ ಅಹ್ಮದ್ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಅವರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ಹೇಳಿವೆ.