ಸುಪ್ರೀಂಕೋರ್ಟ್ ವಕೀಲರಿಬ್ಬರ ಮನೆ, ಕಚೇರಿಗಳ ಮೇಲೆ ಸಿಬಿಐ ದಾಳಿ

ಸುಪ್ರೀಂಕೋರ್ಟ್ ವಕೀಲರಿಬ್ಬರ ಮನೆ, ಕಚೇರಿಗಳ ಮೇಲೆ ಸಿಬಿಐ ದಾಳಿ

HSA   ¦    Jul 11, 2019 04:19:59 PM (IST)
ಸುಪ್ರೀಂಕೋರ್ಟ್ ವಕೀಲರಿಬ್ಬರ ಮನೆ, ಕಚೇರಿಗಳ ಮೇಲೆ ಸಿಬಿಐ ದಾಳಿ

ನವದೆಹಲಿ: ವಿದೇಶದಿಂದ ಹಣ ಪಡೆಯುವಾಗ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕಾಗಿ ಸಿಬಿಐ ಗುರುವಾರ ಸುಪ್ರೀಂಕೋರ್ಟ್ ನ ಹಿರಿಯ ವಕೀಲರಾಗಿರುವ ಆನಂದ್ ಗ್ರೋವರ್ ಮತ್ತು ಅವರ ಪತ್ನಿ ಇಂದಿರಾ ಜೈಸಿಂಗ್ ಮನೆ ಹಾಗೂ ಕಚೇರಿಗೆ ದಾಳಿ ಮಾಡಿದೆ.

ಮುಂಬಯಿ ಮತ್ತು ದೆಹಲಿಯಲ್ಲಿ ಈ ದಾಳಿಯು ನಡೆದಿದೆ ಎಂದು ವರದಿಗಳು ಹೇಳಿವೆ.

ಗೃಹ ಸಚಿವಾಲಯದ ಸೂಚನೆಯ ಮೇರೆಗೆ ವಿದೇಶದಿಂದ ದೇಣಿಗೆ ಪಡೆದ ವಕೀಲರ ಮೇಲೆ ಜೂನ್ 18ರಂದು ಸಿಬಿಐ ಎಫ್ ಐಆರ್ ದಾಖಲಿಸಿತ್ತು. 2010ರ ವಿದೇಶಿ ದೇಣಿಗೆ ಕಾಯ್ದೆ ಉಲ್ಲಂಘಿಸಿ ದೇಣಿಗೆ ಪಡೆಯಲಾಗಿದೆ ಎಂದು ಸಿಬಿಐ ಹೇಳಿದೆ.

ವಕೀಲರ ಹೆಸರಿನಲ್ಲಿದ್ದ ಎನ್ ಜಿ ಒ 2006-07 ರಿಂದ 2014-15ರ ತನಕ ಒಟ್ಟು 32.39 ಕೋಟಿ ರೂಪಾಯಿ ದೇಣಿಗೆಯಾಗಿ ಪಡೆದುಕೊಂಡಿತ್ತು ಎಂದು ವರದಿಗಳು ಹೇಳಿದೆ.