ಜಮ್ಮು ಕಾಶ್ಮೀರದಲ್ಲಿ ಅಪಘಾತ: ಗಾಯಗೊಂಡ ಯೋಧರಿಗೆ ಸ್ಥಳೀಯರ ಆರೈಕೆ

ಜಮ್ಮು ಕಾಶ್ಮೀರದಲ್ಲಿ ಅಪಘಾತ: ಗಾಯಗೊಂಡ ಯೋಧರಿಗೆ ಸ್ಥಳೀಯರ ಆರೈಕೆ

Sep 05, 2017 12:05:51 PM (IST)
ಜಮ್ಮು ಕಾಶ್ಮೀರದಲ್ಲಿ ಅಪಘಾತ: ಗಾಯಗೊಂಡ ಯೋಧರಿಗೆ ಸ್ಥಳೀಯರ ಆರೈಕೆ

ಶ್ರೀನಗರ: ಬುಧವಾರ ಇಲ್ಲಿನ ಬುದ್ಗಾಮ್ ಜಿಲ್ಲೆಯಲ್ಲಿ ಸೇನಾ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕಕ್ಕೆ ಉರುಳಿತ್ತು. ಈ ಸಂದರ್ಭ ಗಾಯಗೊಂಡ ಯೋಧರಿಗೆ ಸ್ಥಳೀಯರು ಸಹಾಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಪಘಾತದಿಂದಾಗಿ ಹಲವು ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಸೈನಿಕರಿಗೆ ಆರೈಕೆ ಮಾಡಿ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ವರ್ಷವೂ ಕೂಡ ಇಲ್ಲಿನ ಪರಿಂಪೋರಾ – ಪಂತ ಚೌಕ್ ಬೈಪಾಸ್ನ ಲಸ್ಜನ್ ಬಳಿ ನಡೆದ ಟ್ರಕ್ ಅಪಘಾತದಲ್ಲಿ ಗಾಯಗೊಂಡ ಸೈನಿಕರು ಹೊರಬರಲು ಸ್ಥಳೀಯರು ಸಹಾಯ ಮಾಡಿದ್ದರು.