ಚೀನಾದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುಂಬೈ ಯುವಕ!

ಚೀನಾದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುಂಬೈ ಯುವಕ!

YK   ¦    Jan 12, 2018 05:42:46 PM (IST)
ಚೀನಾದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುಂಬೈ ಯುವಕ!

ಮುಂಬೈ: ಮಹಾರಾಷ್ಟ್ರದ ಯವತ್ಮಾಲ್ ನಲ್ಲಿ ಹಿಂದೂ ಸಂಪ್ರದಾಯದಂತೆ ಚೀನಾದ ಯುವಕನೊಂದಿಗೆ ಭಾರತೀಯ ಯುವಕ ವಿವಾಹವಾಗುವ ಮೂಲಕ ಮುಂಬೈನಲ್ಲಿ ಮೊದಲ ಸಲಿಂಗ ಮದುವೆ ನಡೆದಿದೆ. 

ಮಹಾರಾಷ್ಟ್ರದ ಯವತ್ಮಾಲ್ ನ ಯುವಕ ಅಮೆರಿಕಕ್ಕೆ ಕೆಲಸಕ್ಕೆಂದು ತೆರಳಿದ್ದಾಗ ಅಲ್ಲಿ ಈತನಿಗೆ ಚೀನಾದ ಯುವಕನ ಜತೆ ಪರಿಚಯವಾಗಿದೆ. ನಂತರ ಈ ಪರಿಚಯ ಪ್ರೇಮಕ್ಕೆ ತಿರುಗಿತು. ಅದರಂತೆ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದು, ಗುರುವಾರ ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನೂ ಅಚ್ಚರಿಯೇನೆಂದರೆ ಕುಟುಂಬಸ್ಥರೇ ಇವರಿಬ್ಬರಿಗೆ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಮೊದಲಿಗೆ ಇವರಿಬ್ಬರ ವಿವಾಹಕ್ಕೆ ಯವತ್ಮಾಲ್ ಯುವಕ ತಂದೆ ನಿರಾಕರಿಸಿದ್ದಾರೆ. ಕೊನೆಗೆ ಯಾವುದೇ ವಿಧಿಯಿಲ್ಲದೆ ತಂದೆ ಮಗನ ಸಲಿಂಗ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಭಾರತದ ಯುವಕ ಹಾಗೂ ಚೀನಾ ಯುವಕನ ಸಲಿಂಗ ಮದುವೆ ಭಾರೀ ಚರ್ಚೆ ಹುಟ್ಟು ಹಾಕಿದೆ. ಇವರಿಬ್ಬರ ಮದುವೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.