ಹೊಸ ಹುದ್ದೆಗೆ ರಾಜೀನಾಮೆ ನೀಡಿದ ಅಲೋಕ್ ವರ್ಮಾ

ಹೊಸ ಹುದ್ದೆಗೆ ರಾಜೀನಾಮೆ ನೀಡಿದ ಅಲೋಕ್ ವರ್ಮಾ

HSA   ¦    Jan 11, 2019 05:15:23 PM (IST)
ಹೊಸ ಹುದ್ದೆಗೆ ರಾಜೀನಾಮೆ ನೀಡಿದ ಅಲೋಕ್ ವರ್ಮಾ

ನವದೆಹಲಿ: ಸಿಬಿಐ ನಿರ್ದೇಶಕನನ ಸ್ಥಾನದಿಂದ ವಜಾಗೊಂಡಿರುವ ಅಲೋಕ್ ವರ್ಮಾ ಹೊಸ ಜವಾಬ್ದಾರಿ ಸ್ವೀಕರಿಸಲು ನಿರಾಕರಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬುಧವಾರ ಸಿಬಿಐ ನಿರ್ದೇಶಕನ ಹುದ್ದೆಗೆ ಮರಳಿದ್ದ ಅಲೋಕ್ ವರ್ಮಾ ಅವರನ್ನು ಆಯ್ಕೆ ಸಮಿತಿ ಗುರುವಾರ ವಜಾ ಮಾಡಿತ್ತು.

ನನ್ನನ್ನು ವರ್ಗಾವಣೆ ಮಾಡಿರುವುದು ಬೇಸರ ಮೂಡಿಸಿದೆ. ಭ್ರಷ್ಟ ವ್ಯಕ್ತಿಯೊಬ್ಬರ ನಿರಾಧಾರ, ತಪ್ಪು ಮತ್ತು ತಿರುಳಿಲ್ಲದ ಆರೋಪದಿಂದ ಹೀಗೆ ಮಾಡಲಾಗಿದೆ ಎಂದು ವರ್ಮಾ ಪ್ರತಿಕ್ರಿಯಿಸಿದ್ದಾರೆ.

ವರ್ಮಾ ಅವರನ್ನು ಸಿಬಿಐ ನಿರ್ದೇಶಕನ ಸ್ಥಾನದಿಂದ ವಜಾಗೊಳಿಸಿ ಅಗ್ನಿಶಾಮಕ ಸೇವೆಗಳು ಮತ್ತು ಗೃಹರಕ್ಷಕ ದಳದ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು.