ದೇಶದ ಪ್ರಥಮ ಬುಡಕಟ್ಟು ಮಹಿಳಾ ಫೈಲಟ್ ಆಗಿ ಅನುಪ್ರಿಯಾ

ದೇಶದ ಪ್ರಥಮ ಬುಡಕಟ್ಟು ಮಹಿಳಾ ಫೈಲಟ್ ಆಗಿ ಅನುಪ್ರಿಯಾ

YK   ¦    Sep 10, 2019 11:36:16 AM (IST)
ದೇಶದ ಪ್ರಥಮ ಬುಡಕಟ್ಟು ಮಹಿಳಾ ಫೈಲಟ್ ಆಗಿ ಅನುಪ್ರಿಯಾ

ನವದೆಹಲಿ: ಸಾಧನೆ ಮಾಡುವ ಛಲವಿದ್ದರೆ ಯಾವುದೇ ಜಾತಿ, ವರ್ಗ ಎದುರಾಗುವುದಿಲ್ಲ ಎಂದು 23ವರ್ಷದ ಅನುಪ್ರಿಯ ಲಕ್ರಾ ದೇಶದ ಮೊದಲ ಬುಡಕಟ್ಟು ಜನಾಂಗದ ಫೈಲಟ್ ಆಗುವ ಮೂಲಕ ಸಾಧನೆ ಮಾಡಿ ತೋರಿಸಿದ್ದಾರೆ.

ಬಾಲ್ಯದಿಂದಲೇ ಫೈಲಟ್ ಆಗಬೇಕೆಂಬ ಕನಸು ಕಟ್ಟಿಕೊಂಡಿದ್ದ ಅನುಪ್ರಿಯಾ ಇದೀಗ ತಮ್ಮ ಶ್ರಮದಿಂದ ಇತಿಹಾಸ ಸೃಷ್ಟಿಸಿದ್ದಾರೆ. ಈಕೆ ಓಡಿಶಾದ ಪೊಲೀಸ್ ಮರಿನಿಯಾಸ್ ಲಕ್ರಾ  ಹಾಗೂ ಗೃಹಿಣಿ ಯಶ್ಮಿನಿ ಲಕ್ರಾ ದಂಪತಿ ಪುತ್ರಿ.

ಈಕೆ ಮೆಟ್ರಿಕ್ಯುಲೇಷನ್ ಹಾಗೂ ಪ್ರೌಢಶಾಲೆಯನ್ನು ಸೆಮಿಲಿಗುಡಾದಲ್ಲಿ ಪೊರೈಸಿದ್ದಾರೆ.  

ಅನುಪ್ರಿಯ ಎಂಜಿನಿಯಂಗ್ ಮಾಡಿದ್ದು , ಪರೀಕ್ಷೆ ಬರೆದು ಪಾಸ್ ಆಗಿ ಫೈಲಟ್ ಟ್ರೈನಿಂಗ್ ಇನ್ಸ್ ಸ್ಟಿಟ್ಯೂನ್ ನಲ್ಲಿ ತರಬೇತಿ ಸೇರಿಕೊಂಡರು. ಓದಿನಲ್ಲಿರುವ ಶ್ರದ್ಧೆ ಹಾಗೂ ಛಲದಿಂದ ದೇಶದ ಮೊದಲ ಬುಡಕಟ್ಟು ಜನಾಂಗದ ಫೈಲಟ್ ಆಗುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ.  ವಿದ್ಯಾಭ್ಯಾಸ ಮುಗಿದ ಬಳಿಕ ಸಹಾಯಕ ಫೈಲಟ್ ಆಗಿ ಕೆಲಸ ಮಾಡಿದ್ದರು.

ಓಡಿಶಾ ಮುಖ್ಯಮಂತ್ರಿ ಟ್ವೀಟ್ ಮಾಡಿ, ‘ಅನುಪ್ರಿಯಾ ಅವರ ಸಾಧನೆಯನ್ನು ಮೆಚ್ಚಿ, ಮುಂದಿನ ಜೀವನಕ್ಕೆ ಶುಭವಾಗಲಿ ಎಂದು ಶುಭ ಹಾರೈಸಿದ್ದಾರೆ.

ಆಕೆಯ ಪೋಷಕರು ಪ್ರತಿಕ್ರಿಯಿಸಿ , ಈ ಪ್ರಯಾಣ ಸುಲಭವಾಗಿರಲಿಲ್ಲ. ತುಂಬಾ ಹೆಮ್ಮೆಯಿದೆ ಎಂದರು.ಆಕೆಯ ತಾಯಿ ಪ್ರತಿಕ್ರಿಯಿಸಿ, ನಾವು ಹಿಂದುಳಿದ ಗ್ರಾಮದವರಾಗಿದ್ದರಿಂದ ನಮ್ಮ ಮಗಳಿಂದ  ಈ ಸಾಧನೆ ಮಾಡಲು ಸಾಧ್ಯವಾಗಲ್ಲ ಎಂದು ಜನರು ಹೀಯಾಳಿಸುತ್ತಿದ್ದರು. ಆದರೆ ನಮ್ಮ ಮಗಳು ಅವೆಲ್ಲವನ್ನೂ ಮೆಟ್ಟಿ ಸಾಧನೆ ಮಾಡಿದ್ದಾಳೆ ಎಂದರು.  ಆಕೆಯ ಸಾಧನೆಯನ್ನು ಇಡಿ ಕುಟುಂಬವೇ ಸಂಭ್ರಮಿಸುತ್ತಿದೆ. ಸಾಮಾಜುಇಕ ಜಾಲತಾಣದಲ್ಲಿ ನಮ್ಮ ಮಗಳಿಗೆ ಶುಭ ಹಾರೈಕೆಗಳು ಬರಯುತರ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. 

More Images