ಮುಂಬರುವ ಚುನಾವಣೆಯಲ್ಲಿ ಕುಟುಂಬದವರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದಿಲ್ಲ: ದೇವೇಗೌಡ

ಮುಂಬರುವ ಚುನಾವಣೆಯಲ್ಲಿ ಕುಟುಂಬದವರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದಿಲ್ಲ: ದೇವೇಗೌಡ

YK   ¦    Sep 12, 2019 05:43:43 PM (IST)
ಮುಂಬರುವ ಚುನಾವಣೆಯಲ್ಲಿ ಕುಟುಂಬದವರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದಿಲ್ಲ: ದೇವೇಗೌಡ

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ನಮ್ಮ ಕುಟುಂಬದವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಇಂದು ಪಕ್ಷದ ವೆಬ್ ಸೈಟ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರನ್ನೂ ತರುವುದಿಲ್ಲ. ಸ್ಥಳೀಯ ನಾಯಕರಿಗೆ ಪಕ್ಷದ ಹೊಣೆಗಾರಿಕೆಯನ್ನು ನೀಡಾಗುವುದು ಎಂದರು.

ಕೆ.ಆರ್.ಪೇಟೆ ಉಪಚುನಾವಣೆ ಬಗ್ಗೆ ಮಾತನಾಡಿ, ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಕೆ.ಆರ್.ಪೇಟೆಗೆ ಭೇಟಿ ನೀಡಿದ್ದು, ನಾನು ಹೋಗಿ ಅಲ್ಲಿನ ಕಾರ್ಯಕರ್ತರ ಜತೆ ಮಾತನಾಡಲಿದ್ದೇನೆ.

ಅಲ್ಲಿನ ಪಕ್ಷದ ಕಾರ್ಯಕರ್ತರು ಹೆಸರನ್ನು ಸೂಚಿಸಿದ್ದು ಅವರನ್ನೇ ಮುಂದಿನ ಸ್ಪರ್ಧೆಗೆ ಇಳಿಸಲಾಗುವುದು. ಅದಲ್ಲದೆ ಈ ಮಾದರಿ ಹುಣಸೂರಿಗೆ ಅನ್ವಯಿಸಯತ್ತದೆ ಎಂದರು.

ಅಲ್ಲಿನ ಪಕ್ಷದ ಕಾರ್ಯಕರ್ತರು ಹೆಸರನ್ನು ಸೂಚಿಸಿದ್ದು ಅವರನ್ನೇ ಮುಂದಿನ ಸ್ಪರ್ಧೆಗೆ ಇಳಿಸಲಾಗುವುದು. ಅದಲ್ಲದೆ ಈ ಮಾದರಿ ಹುಣಸೂರಿಗೆ ಅನ್ವಯಿಸಯತ್ತದೆ ಎಂದರು.