ಈ ವರ್ಷ ಶೇ.97ರಷ್ಟು ಮಳೆ ನಿರೀಕ್ಷೆ: ಹವಾಮಾನ ಇಲಾಖೆ

ಈ ವರ್ಷ ಶೇ.97ರಷ್ಟು ಮಳೆ ನಿರೀಕ್ಷೆ: ಹವಾಮಾನ ಇಲಾಖೆ

HSA   ¦    Apr 16, 2018 08:45:21 PM (IST)
ಈ ವರ್ಷ ಶೇ.97ರಷ್ಟು ಮಳೆ ನಿರೀಕ್ಷೆ: ಹವಾಮಾನ ಇಲಾಖೆ

ನವದೆಹಲಿ: ಕೃಷಿಕರಿಗೆ ಶುಭ ಸುದ್ದಿಯೊಂದನ್ನು ಹವಾಮಾನ ಇಲಾಖೆಯು ನೀಡಿದ್ದು, ಈ ವರ್ಷ ಶೇ. 97ರಷ್ಟು ಮಹಿಳೆಯಾಗಲಿದೆ ಎಂದು ಹೇಳಿದೆ.

ಈ ವರ್ಷ ಮಳೆಯ ಕೊರತೆಯಾಗದು. ಸರಿಯಾದ ಪ್ರಮಾಣದಲ್ಲಿ ಅಂದರೆ ಶೇ. 97ರಷ್ಟು ಮಳೆಯಾಗುವ ನಿರೀಕ್ಷೆಯಿದೆ. ಕಳೆದ ಸಲ ಕೂಡ ನಮ್ಮ ನಿರೀಕ್ಷೆಯಂತೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಕೆ.ಜೆ. ರಮೇಶ್ ತಿಳಿಸಿದರು.

ದೇಶದೆಲ್ಲೆಡೆಯಲ್ಲಿ ರೈತರು ಮುಂಗಾರು ಮಳೆಯನ್ನೇ ಕೃಷಿ ಚಟುವಟಿಕೆಗಳಿಗೆ ಅವಲಂಬಿಸಿರುವ ಕಾರಣ ಹವಾಮಾನ ಇಲಾಖೆಯ ಈ ಸುದ್ದಿಯಿಂದ ಕೃಷಿಕರಲ್ಲಿ ಸಂತಸ ಮನೆ ಮಾಡಿದೆ.