ಮಾರ್ಚ್ 31ರ ವರೆಗೆ ಆಧಾರ್ ಜೋಡನೆಗೆ ಸುಪ್ರೀಂ ಕೋರ್ಟ್ ಆದೇಶ

ಮಾರ್ಚ್ 31ರ ವರೆಗೆ ಆಧಾರ್ ಜೋಡನೆಗೆ ಸುಪ್ರೀಂ ಕೋರ್ಟ್ ಆದೇಶ

YK   ¦    Mar 13, 2018 06:32:17 PM (IST)
ಮಾರ್ಚ್ 31ರ ವರೆಗೆ ಆಧಾರ್ ಜೋಡನೆಗೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಬ್ಯಾಂಕ್‌ ಖಾತೆ, ಮೊಬೈಲ್‌ ಸಿಮ್‌ ಸೇರಿದಂತೆ ವಿವಿಧ ಸೇವೆಗಳಿಗೆ ಆಧಾರ್‌ ಜೋಡಣೆ ಮಾಡಲು ಸುಪ್ರಿಂ ಕೋರ್ಟ್ ಇದೇ ಮಾರ್ಚ್‌ 31ರವರೆಗೆ ನಿಗದಿಯನ್ನು ವಿಸ್ತರಿಸಿದೆ. ಮಂಗಳವಾರ ಮುಂದಿನ ಆದೇಶದ ವರೆಗೂ ಆಧಾರ್ ಜೋಡಣೆ ಗಡುವು ಮುಂದೂಡಿ ಸುಪ್ರೀಂ ಕೋರ್ಟ್‌ ಆದೇಶವನ್ನು ಹೊರಡಿಸಿದೆ.

ಸಮಾಜ ಕಲ್ಯಾಣ ಕಾರ್ಯಕ್ರಮಗಳ ಅಡಿ ಸರ್ಕಾರದಿಂದ ಪಡೆಯುವ ಸವಲತ್ತುಗಳಿಗೆ ಆಧಾರ್‌ ಕಡ್ಡಾಯ ಎಂದು ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ತಿಳಿಸಿದೆ.

ಆಧಾರ್ ಕಡ್ಡಾಯ ಬಳಕೆ ಪ್ರಶ್ನಿಸಿ ದಾಖಲಾಗಿರುವ ದೂರಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಕೈಗೆತ್ತಿಕೊಂಡಿದೆ.