ಮುಂಬೈ: ಏರ್ ಇಂಡಿಯಾ ನೌಕರರ ಮುಷ್ಕರದಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯ

ಮುಂಬೈ: ಏರ್ ಇಂಡಿಯಾ ನೌಕರರ ಮುಷ್ಕರದಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯ

YK   ¦    Nov 08, 2018 01:00:02 PM (IST)
ಮುಂಬೈ: ಏರ್ ಇಂಡಿಯಾ ನೌಕರರ ಮುಷ್ಕರದಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯ

ಮುಂಬೈ: ಏರ್ ವಿಮಾನಯಾನ ಸಂಸ್ಥೆಯ ಗುತ್ತಿಗೆ ನೌಕರರು ಗುರುವಾರ ದಿಢೀರ್ ಮುಷ್ಕರ ನಡೆಸಿದ್ದರಿಂದ ಮುಂಬೈನಲ್ಲಿ ಏರ್ ಇಂಡಿಯಾ ವಿಮಾನಗಳ ಹಾರಾಟದಲ್ಲಿ 2 ಗಂಟೆಗಳ ಕಾಲ ವ್ಯತ್ಯಯವಾಗಿತ್ತು.

ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಮುಂಬೈನ ವಿಮಾನ ನಿಲ್ದಾಣದ ಟರ್ಮಿನಲ್-1 ಮತ್ತು ಟರ್ಮಿನಲ್ 2ರಲ್ಲಿ ಕೆಲಸ ಮಾಡುತ್ತಿರುವ ನೌಕರರು ಮುಷ್ಕರ ಆರಂಭಿಸಿದ್ದಾರೆ.

ಇದರಿಂದ ಮುಂಬೈನಿಂದ ಹೊರಡುವ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿತ್ತು ಎಂದು ಸುದ್ದಿಯಾಗಿದೆ.