ಎರಡು ಪಂದ್ಯಗಳಿಗೆ ಶಿಖರ್ ಧವನ್ ಅಲಭ್ಯ

ಎರಡು ಪಂದ್ಯಗಳಿಗೆ ಶಿಖರ್ ಧವನ್ ಅಲಭ್ಯ

HSA   ¦    Jun 11, 2019 02:44:17 PM (IST)
ಎರಡು ಪಂದ್ಯಗಳಿಗೆ ಶಿಖರ್ ಧವನ್ ಅಲಭ್ಯ

ಲಂಡನ್: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ವಿಶ್ವಕಪ್ ನ ಎರಡು ಪಂದ್ಯಗಳಿಂದ  ಹೊರಬಿದ್ದಿದ್ದಾರೆ.

ಧವನ್ 117 ರನ್ ಬಾರಿಸಿದ ವೇಳೆ ಗಾಯಗೊಂಡಿದ್ದರು. ಧವನ್ ಹೆಬ್ಬೆರಳಿಗೆ ಆಗಿರುವ ಗಾಯ ಗುಣಮುಖವಾಗಲು ವಿಶ್ರಾಂತಿ ಬೇಕಾಗಿರುವ ಹಿನ್ನೆಲೆಯಲ್ಲಿ ವಿಶ್ವಕಪ್ ನ ಉಳಿದ ಪಂದ್ಯಗಳಿಗೆ ಧವನ್ ಅಲಭ್ಯರಾಗಲಿರುವರು.

ರೋಹಿತ್ ಶರ್ಮಾ ಅವರೊಂದಿಗೆ ಕೆ.ಎಲ್.ರಾಹುಲ್ ಅವರು ಆರಂಭಿಕರಾಗಿ ಆಡಲಿರುವರು. ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಲಿರುವರು.