ಅರ್ಜುನ್ ಪ್ರಶಸ್ತಿಗೆ ಬುಮ್ರಾ, ಶಮಿ, ಜಡೇಜಾ, ಪೂನಂ ಹೆಸರು ಶಿಫಾರಸ್ಸು

ಅರ್ಜುನ್ ಪ್ರಶಸ್ತಿಗೆ ಬುಮ್ರಾ, ಶಮಿ, ಜಡೇಜಾ, ಪೂನಂ ಹೆಸರು ಶಿಫಾರಸ್ಸು

HSA   ¦    Apr 27, 2019 03:23:32 PM (IST)
ಅರ್ಜುನ್ ಪ್ರಶಸ್ತಿಗೆ ಬುಮ್ರಾ, ಶಮಿ, ಜಡೇಜಾ, ಪೂನಂ ಹೆಸರು ಶಿಫಾರಸ್ಸು

ನವದೆಹಲಿ: ವೇಗಿಗಳಾಗಿರುವ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಮತ್ತು ಪೂನಂ ಯಾದವ್ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅರ್ಜುನ್ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.

ಸುಪ್ರೀಂಕೋರ್ಟ್ ನಿಂದ ನೇಮಕಗೊಂಡಿರುವ ಆಡಳಿತಾಧಿಕಾರಿ ಸಮಿತಿ(ಸಿಒಎ) ರಾಜಧಾನಿಯಲ್ಲಿ ಸಭೆ ನಡೆಸಿದತು. ಈ ವೇಳೆ ಕ್ರಿಕೆಟ್ ಆಪರೇಷನ್ ನ ಮುಖ್ಯ ಪ್ರಬಂಧಕ ಸಾಬಾ ಕರೀಂ ಅವರು ಈ ನಾಲ್ಕು ಮಂದಿ ಹೆಸರನ್ನು ಶಿಫಾರಸ್ಸು ಮಾಡಿದರು.

ಬುಮ್ರಾ ಟೀಂ ಇಂಡಿಯಾದ ಪ್ರಮುಖ ಅಸ್ತ್ರವಾಗಿದ್ದು, ವಿಶ್ವಕಪ್ ನಲ್ಲಿ ಕೂಡ ವೇಗದ ಬೌಲಿಂಗ್ ಪಾಳಯವನ್ನು ಮುನ್ನಡೆಸಲಿದ್ದಾರೆ. ಶಮಿ ಕೂಡ ಇತ್ತೀಚೆಗೆ ಉತ್ತಮ ಫಾರ್ಮ್ ನಲ್ಲಿದ್ದಾರೆ.

ಮಹಿಳಾ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಪೂನಂ ಕೂಡ ಅರ್ಜುನ್ ಪ್ರಶಸ್ತಿಗೆ ನೇಮಕವಾಗಿದ್ದಾರೆ.